5710 : ವೈರ್‌ಲೆಸ್ ಇಯರ್‌ಬಡ್ಸ್ ಸಹಿತ ಬರಲಿದೆ ಐಕಾನಿಕ್ ನೋಕಿಯ ಬೆಂಗಳೂರು: ಮೊಬೈಲ್ ಫೋನ್ ಆರಂಭದ ದಿನಗಳಲ್ಲಿ ಮಾರುಕಟ್ಟೆಯ ರಾಜನಂತೆ ಮೆರೆದಿದ್ದ ನೋಕಿಯಾ, ಸ್ಮಾರ್ಟ್‌ಫೋನ್ ಯುಗದಲ್ಲಿ ಸ್ವಲ್ಪ ಹಿಂದಕ್ಕೆ ಉಳಿದಿದೆ. ಎಚ್‌ಎಂಡಿ ಗ್ಲೋಬಲ್ ಒಡೆತನಕ್ಕೆ ಬಂದ ಬಳಿಕ ನೋಕಿಯಾ, ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಒಂದು ಕಾಲದಲ್ಲಿ ಐಕಾನಿಕ್ ಮ್ಯೂಸಿಕ್ ಪ್ಲೇಯರ್ ಆಗಿದ್ದ ನೋಕಿಯಾ 5710 ಎಕ್ಸ್‌ಪ್ರೆಸ್‌ ಮ್ಯೂಸಿಕ್ ಮೊಬೈಲ್, ಹೊಸ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಪ್ರವೇಶಿಸಲಿದೆ. ಹೊಸ ವಿನ್ಯಾಸದ ನೋಕಿಯಾ 5710 ಎಕ್ಸ್‌ಪ್ರೆಸ್ ಮ್ಯೂಸಿಕ್ ಮೊಬೈಲ್‌ನ ಹಿಂಭಾಗದಲ್ಲಿ ಟ್ರೂ ವೈರ್‌ಲೆಸ್ ಸ್ಟಿರಿಯೊ ಇಯರ್‌ಬಡ್ಸ್ ಸಹಿತ ಲಭ್ಯವಾಗಲಿದ್ದು, ಅದರಲ್ಲಿಯೇ ಇರಿಸಿಕೊಳ್ಳಲು ಸ್ಥಳಾವಕಾಶ ಇರಲಿದೆ. ಅಲ್ಲದೆ, ಮ್ಯೂಸಿಕ್ ಎಕ್ಸ್‌ಪ್ರೆಸ್ ಮೊಬೈಲ್‌ನಲ್ಲಿ ಮ್ಯೂಸಿಕ್, ವಾಲ್ಯೂಮ್ ಕಂಟ್ರೋಲ್, ಎಫ್‌ಎಂ ಬಟನ್ ಇರಲಿದೆ. C21 : ಸಿ ಸರಣಿಯಲ್ಲಿ ನೂತನ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ನೋಕಿಯ ಹಳೆಯ ಮಾದರಿಯ ಕೀಪ್ಯಾಡ್, ಕ್ಯಾಮೆರಾ, S30+ , 48 ಮತ್ತು 32 ಸ್ಟೋರೇಜ್ ನೂತನ ನೋಕಿಯಾ ಫೋನ್‌ನ ವಿಶೇಷತೆಯಾಗಿರಲಿದೆ. ಭಾರತದಲ್ಲಿ ಬಿಡುಗಡೆ ಮತ್ತು ಬೆಲೆ ವಿವರವನ್ನು ಕಂಪನಿ ಇನ್ನಷ್ಟೇ ಬಹಿರಂಗಪಡಿಸಬೇಕಿದೆ. ಅಪ್‌ಗ್ರೇಡೆಡ್ ನೋಕಿಯಾ 105 ಮತ್ತು ಹೊಸ ನೋಕಿಯಾ 105 ಪ್ಲಸ್ ಭಾರತದಲ್ಲಿ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.