ಭಾರತದಲ್ಲಿ 8210 4G ಫೀಚರ್ ಫೋನ್‌ ಬಿಡುಗಡೆ ಮಾಡಿದ ನೋಕಿಯಾ; ಬೆಲೆ ಎಷ್ಟು? ನವದೆಹಲಿ: ಗುಣಮಟ್ಟದ ಫೀಚರ್‌ ಫೋನ್‌ ತಯಾರಿಕಾ ಕಂಪೆನಿ ನೋಕಿಯಾ, ಅತ್ಯುತ್ತಮ ಬಾಳಿಕೆ, ಆಕರ್ಷಕ ವಿನ್ಯಾಸ ಹಾಗೂ ಉತ್ತಮ ಸಾಮರ್ಥ್ಯದ ಬ್ಯಾಟರಿ ಸೌಲಭ್ಯಗಳನ್ನು ಹೊಂದಿರುವ ತನ್ನ ಹೊಸ ಉತ್ಪನ್ನ 8210 4G ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 8210 4G ಸಹ ನೋಕಿಯಾದ ಎಂದಿನ ಗುಣಮಟ್ಟವನ್ನು ಹೊಂದಿರಲಿದೆ. ಇನ್‌ಬಿಲ್ಟ್‌ ಎಂಪಿ3 ಪ್ಲೇಯರ್‌, ವಯರ್‌ಲೆಸ್‌ ಹಾಗೂ ವಯರ್‌ ಒಳಗೊಂಡ ಸುಧಾರಿತ ಎಫ್‌ಎಂ ರೇಡಿಯೊ, ಸಂವಹನಕ್ಕೆ ನೆರವಾಗುವ4ಜಿ ನೆಟ್‌ವರ್ಕ್‌ ಕನೆಕ್ಟಿವಿಟಿ,ಸುದೀರ್ಘ ಮಾತುಕತೆಗೆ ಸಹಕರಿಸುವಅತ್ಯುತ್ತಮ ಬ್ಯಾಟರಿ, ಉತ್ತಮ ಗುಣಮಟ್ಟದ ಕ್ಯಾಮೆರಾ ಮತ್ತು ಸ್ನೇಕ್‌ ಗೇಮ್‌ನಂತಹ ಆಟಗಳನ್ನು ಒಳಗೊಂಡಿರಲಿದೆ. ನೋಕಿಯಾದ ಉಳಿದ ಮೊಬೈಲ್‌ಗಳಂತೆದೀರ್ಘ ಬಾಳಿಕೆಗೆ ಒತ್ತು ನೀಡಲಾಗಿರುವ 8210 4G, 2.8 ಇಂಚಿನಡಿಸ್‌ಪ್ಲೇ, ಆಧುನಿಕ ವೈಶಿಷ್ಟ್ಯಗಳು ಮತ್ತು ಸಾಂಪ್ರದಾಯಿಕ ಶೈಲಿಯ ವಿನ್ಯಾಸ ಹೊಂದಿದೆ. ಭಾರತದಲ್ಲಿ ಈ ಫೋನ್‌ ಅನ್ನು ಆಗಸ್ಟ್‌ 2ರಂದು ಬಿಡುಗಡೆ ಮಾಡಲಾಗಿದ್ದು, . ಹಾಗೂ ./ ತಾಣಗಳಲ್ಲಿ ಖರೀದಿಸಬಹುದಾಗಿದೆ. ಈ ಫೋನ್‌ಗಳು ಕೆಂಪು ಮತ್ತು ನೀಲಿ ಬಣ್ಣದಲ್ಲಿ ಲಭ್ಯ ಇದ್ದು,.inನಲ್ಲಿ ಆಗಸ್ಟ್‌ 6ರಂದು ಮಾರಾಟ ಆರಂಭವಾಗಲಿದೆ. ಬೆಲೆ ₹ 3,999 ಇದೆ. 110 (2022) ಘೋಷಣೆ ಅತ್ಯಾಧುನಿಕ ವಿನ್ಯಾಸ, ಬಳಕೆ ಸ್ನೇಹಿ ವೈಶಿಷ್ಟ್ಯಗಳು, ಅತ್ಯುತ್ತಮ ಕ್ಯಾಮೆರಾ, ಮ್ಯೂಸಿಕ್‌ ಪ್ಲೇಯರ್‌, ಆಟೊ ಕಾಲ್‌ ರೆಕಾರ್ಡಿಂಗ್‌ ಸೌಲಭ್ಯ, ಗರಿಷ್ಠ ಸ್ಟೋರೇಜ್‌ ಸಾಮರ್ಥ್ಯ ಮತ್ತು ಗುಣಮಟ್ಟಕ್ಕೆ ಆದ್ಯತೆ ಹೊಂದಿರುವNew 110 ಅನ್ನು ಈ ವರ್ಷ ಬಿಡುಗಡೆ ಮಾಡುವುದಾಗಿಯೂನೋಕಿಯಾ ಘೋಷಿಸಿದೆ. ಕಡುಗಪ್ಪು, ಗುಲಾಬಿ ಮತ್ತು ಹಸಿರು–ನೀಲಿ ಮಿಶ್ರಿತ ಬಣ್ಣಗಳಲ್ಲಿ ಸಿಗಲಿರುವ ಈ ಫೋನ್‌, 1000 ಸಾಮರ್ಥ್ಯದಬ್ಯಾಟರಿ ಮತ್ತು32GB ಸ್ಟೋರೇಜ್‌ ಸಾಮರ್ಥ್ಯ ಹೊಂದಿರಲಿದೆ.ಕಡುಗಪ್ಪು ಮತ್ತು ಹಸಿರು–ನೀಲಿ ಮಿಶ್ರಿತ ಬಣ್ಣದ ಫೋನ್‌ ಬೆಲೆ₹ 1,699 ಹಾಗೂ ಗುಲಾಬಿ ವರ್ಣದ ಫೋನ್‌ ಬೆಲೆ ₹ 1,799 ಇರಲಿದೆ. ₹ 299 ಬೆಲೆಯ ಇಯರ್‌ ಫೋನ್‌ ಉಚಿತವಾಗಿ ಸಿಗಲಿದ್ದು, ಎಲ್ಲಾ ಮಳಿಗೆಗಳು ಮತ್ತು ./ ಸೇರಿದಂತೆಎಲ್ಲಾ ಇ–ಕಾಮರ್ಸ್‌ ತಾಣಗಳಲ್ಲಿ ಖರೀದಿಸಬಹುದಾಗಿದೆ. ಈ ಎರಡೂ ಫೋನ್‌ಗಳು ( 8210 4G ಮತ್ತು 110) ಒಂದು ವರ್ಷದ ರಿಪ್ಲೇಸ್‌ಮೆಂಟ್‌ ಗ್ಯಾರಂಟಿ ಸೌಲಭ್ಯ ಹೊಂದಿರಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.