ಶಓಮಿ ಎಂಐ ಪ್ಯಾಡ್ 5 ಬಿಡುಗಡೆ: ವೈಶಿಷ್ಟ್ಯಗಳು, ಬೆಲೆ ವಿವರ ಇಲ್ಲಿದೆ.. ಬೆಂಗಳೂರು: ಶಓಮಿ, ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೂತನ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಎಂಐ ಪ್ಯಾಡ್ 5 ಬಿಡುಗಡೆಗೂ ಮುನ್ನ ಕಂಪನಿ, ಹಲವು ಟೀಸರ್ ಮೂಲಕ ಹೊಸ ಗ್ಯಾಜೆಟ್ ಸುಳಿವು ನೀಡಿತ್ತು. ಎಂಐ ಪ್ಯಾಡ್ 5, 11 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. 2.96GHz ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 860 ಪ್ರೊಸೆಸರ್ ಜತೆಗೆ ಅಡ್ರೆನೊ 640 ಗ್ರಾಫಿಕ್ಸ್ ಬೆಂಬಲ ಹೊಂದಿದೆ. ಆ್ಯಂಡ್ರಾಯ್ಡ್ 11 ಆಧಾರಿತ 13 ಆಪರೇಟಿಂಗ್ ಸಿಸ್ಟಂ, 6 LPDDR4X ಜತೆಗೆ 128 ಮತ್ತು 256 3.1 ಸ್ಟೋರೇಜ್ ಆಯ್ಕೆಯಲ್ಲಿ ಹೊಸ ಎಂಐ ಪ್ಯಾಡ್ 5 ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ. ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹಾಗೂ 8,720mAh ಬ್ಯಾಟರಿ ಜತೆಗೆ 33w ಫಾಸ್ಟ್ ಚಾರ್ಜಿಂಗ್ ಇರುವುದಾಗಿ ಶಓಮಿ ತಿಳಿಸಿದೆ. ದೇಶದ ಮಾರುಕಟ್ಟೆಗೆ ಶಓಮಿ ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ ಬೆಲೆ ಮತ್ತು ಲಭ್ಯತೆ 128 ಮತ್ತು 256 ಎಂಬ ಎರಡು ಸ್ಟೋರೇಜ್ ಆವೃತ್ತಿಗೆ ಅನುಗುಣವಾಗಿ ₹26,999 ಮತ್ತು ₹28,999 ದರ ನಿಗದಿಪಡಿಸಲಾಗಿದ್ದು, ಮೇ 3ರಿಂದ ದೊರೆಯಲಿದೆ ಎಂದು ಕಂಪನಿ ಹೇಳಿದೆ. F21 : ಆಕರ್ಷಕ ವಿನ್ಯಾಸದ ಸ್ಮಾರ್ಟ್‌ಫೋನ್ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.