ಸ್ಯಾಮ್ಸಂಗ್‌ ನಿಯೊ ಕ್ಯುಎಲ್‌ಇಡಿ ಟಿ.ವಿ. ಮುಂಗಡ ಬುಕಿಂಗ್‌ಗೆ ಅವಕಾಶ ಬೆಂಗಳೂರು: ಸ್ಯಾಮ್ಸಂಗ್ ಕಂಪನಿಯು ನಿಯೊ ಕ್ಯುಎಲ್‌ಇಡಿ ಟಿ.ವಿ.ಯ ಹೊಸ ಸರಣಿಯ ಮುಂಗಡ ಬುಕಿಂಗ್‌ಗೆ ಅವಕಾಶ ಕಲ್ಪಿಸಿದೆ. ./3JzpjTb ನಲ್ಲಿ ಮುಂಗಡ ಬುಕಿಂಗ್‌ ಮಾಡಬಹುದು ಎಂದು ಹೇಳಿದೆ. ನಿಯೊ ಕ್ಯುಎಲ್‌ಇಡಿ 8ಕೆ ಟಿ.ವಿ.ಯನ್ನು ₹ 10 ಸಾವಿರಕ್ಕೆ ಮುಂಗಡ ಕಾಯ್ದಿರಿಸಬಹುದಾಗಿದ್ದು, ಅಂತಿಮವಾಗಿ ಖರೀದಿಯ ಸಮಯದಲ್ಲಿ ₹ 20 ಸಾವಿರ ರಿಯಾಯಿತಿ ಪಡೆಯಬಹುದಾಗಿದೆ. ನಿಯೊ ಕ್ಯುಎಲ್‌ಇಡಿ ಟಿ.ವಿ.ಯನ್ನು ₹ 5 ಸಾವಿರಕ್ಕೆ ಮುಂಗಡ ಕಾಯ್ದಿರಿಸಬಹುದಾಗಿದ್ದು, ಅಂತಿಮವಾಗಿ ಖರೀದಿಸುವಾಗ ₹ 10 ಸಾವಿರ ರಿಯಾಯಿತಿ ದೊರೆಯಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.