F21 : ಆಕರ್ಷಕ ವಿನ್ಯಾಸದ ಸ್ಮಾರ್ಟ್‌ಫೋನ್ ಬಿಡುಗಡೆ ಬೆಂಗಳೂರು: ಸ್ಮಾರ್ಟ್‌ಫೋನ್ ಫೋಟೊಗ್ರಫಿ ಪ್ರಿಯರಿಗಾಗಿ ಒಪ್ಪೊ, ಹೊಸ F21 ಬಿಡುಗಡೆ ಮಾಡಿದೆ. ತೆಳುವಾದ ವಿನ್ಯಾಸ, ತನ್ನ ಸೆಗ್ಮೆಂಟ್‌ನಲ್ಲೇ ಮೊದಲ ಬಾರಿಗೆ ಸೋನಿ IMX709 ಸೆಲ್ಫಿ ಕ್ಯಾಮೆರಾ ಸೆನ್ಸರ್ ಹೊಂದಿದೆ ಎಂದು ಒಪ್ಪೊ ಹೇಳಿದೆ. ಒಪ್ಪೊ F21 ಮತ್ತು F21 5G ದೇಶದ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಒಪ್ಪೊ F21 ವೈಶಿಷ್ಟ್ಯಗಳು ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 680 ಪ್ರೊಸೆಸರ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ 64 ಮೆಗಾಪಿಕ್ಸೆಲ್ ಜತೆಗೆ 2+2 ಮೆಗಾಪಿಕ್ಸೆಲ್ ತ್ರಿವಳಿ ಹಿಂಬದಿ ಕ್ಯಾಮೆರಾ 6.4 ಇಂಚಿನ ಅಮೊಲಿಡ್ ಡಿಸ್‌ಪ್ಲೇ 4500mAh ಬ್ಯಾಟರಿ, 33W ಸೂಪರ್‌ಚಾರ್ಜ್ 8GB + 128GB ಇದರಲ್ಲಿದೆ. ಒಪ್ಪೊ F21 5G ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 695 ಪ್ರೊಸೆಸರ್ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ 64 ಮೆಗಾಪಿಕ್ಸೆಲ್ ಜತೆಗೆ 2+2 ಮೆಗಾಪಿಕ್ಸೆಲ್ ತ್ರಿವಳಿ ಹಿಂಬದಿ ಕ್ಯಾಮೆರಾ 6.4 ಇಂಚಿನ ಅಮೊಲಿಡ್ ಡಿಸ್‌ಪ್ಲೇ 4500mAh ಬ್ಯಾಟರಿ, 33W ಸೂಪರ್‌ಚಾರ್ಜ್ 8GB + 128GB ಇದರ ವಿಶೇಷತೆ ಎಂದು ಒಪ್ಪೊ ಹೇಳಿದೆ. ಬೆಲೆ ಮತ್ತು ಲಭ್ಯತೆ ಒಪ್ಪೊ F21 ದರ ₹22,999 ಇದ್ದು, ಏ.15ರಿಂದ ಲಭ್ಯವಾಗಲಿದೆ. ಬಜೆಟ್ ದರದ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಪರಿಚಯಿಸಿದ ನೋಕಿಯಾ ಒಪ್ಪೊ F21 5G ದರ ₹26,999 ದರವಿದ್ದು, ಏ. 21ರಿಂದ ದೊರೆಯಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ : ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.