ಭಾರತದಲ್ಲಿ ಐಫೋನ್‌ ಎಸ್‌ಇ: ₹38,900 ವಿಶೇಷ ದರ ಬೆಂಗಳೂರು: ಆ್ಯಪಲ್‌ ಕಂಪನಿಯ ಐಫೋನ್‌ ಮಾದರಿಗಳಲ್ಲಿ ಕೈಗೆಟುಕುವ ದರ ಹಾಗೂ ಸಮರ್ಥ ಸ್ಮಾರ್ಟ್‌ಫೋನ್‌ ಎಂದು ಜನಪ್ರಿಯಗೊಂಡಿರುವ 'ಐಫೋನ್‌ ಎಸ್‌ಇ' ಇನ್‌ಗ್ರಾಮ್‌ ಮೈಕ್ರೊ ಮೂಲಕ ಭಾರತದಲ್ಲಿ ಲಭ್ಯವಿದೆ. ಹೊಚ್ಚ ಹೊಸ ಐಫೋನ್‌ ಮಾದರಿಗಳಲ್ಲಿ ಬಳಕೆಯಾಗಿರುವ ಎ13 ಬಯೋನಿಕ್‌ ಚಿಪ್‌ನ್ನು ಐಫೋನ್‌ ಎಸ್‌ಇ ಒಳಗೊಂಡಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯಂತ ವೇಗವಾಗಿ ಕಾರ್ಯನಿರ್ವಹಣೆಗೆ ಈ ಚಿಪ್‌ ಸಹಕಾರಿಯಾಗಿದೆ. ಅತ್ಯುತ್ತಮ ಕಾರ್ಯ ಸಾಮರ್ಥ್ಯದೊಂದಿದೆ ದೀರ್ಘಾವಧಿ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ನೀರು ಮತ್ತು ದೂಳು ಪ್ರತಿರೋಧಕ ಕೋಟಿಂಗ್‌, ಪೋರ್ಟ್ರೇಟ್‌ ಮೋಡ್‌ ಅನುಕೂಲಗಳೊಂದಿಗೆ ಒಂದೇ ಕ್ಯಾಮೆರಾ ಸೆನ್ಸರ್‌ ಇದೆ. ಭಾರತದಲ್ಲಿ 4,200ಕ್ಕೂ ಹೆಚ್ಚು ರಿಟೇಲ್‌ ಮಳಿಗೆಗಳಲ್ಲಿ ಐಫೋನ್‌ ಎಸ್‌ಇ ಖರೀದಿಗೆ ಸಿಗಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ, ಆ ಬ್ಯಾಂಕ್‌ನ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಬಳಸಿ ಐಫೋನ್‌ ಎಸ್‌ಇ ಖರೀದಿಸಿದರೆ ₹3,600 ಕ್ಯಾಷ್‌ಬ್ಯಾಕ್‌ ಸಿಗಲಿದೆ. ಇದರಿಂದಾಗಿ ಐಫೋನ್‌ ಎಸ್‌ಇ ₹38,900 ವಿಶೇಷ ದರದಲ್ಲಿ ಗ್ರಾಹಕರನ್ನು ತಲುಪಲಿದೆ. ಹೆಚ್ಚಿನ ಮಾಹಿತಿಗಾಗಿ, .. ವೆಬ್‌ಸೈಟ್‌ಗೆ ಭೇಟಿ ನೀಡಿ. ಜಗತ್ತಿನಾದ್ಯಂತ ತಂತ್ರಜ್ಞಾನ ಸಂಬಂಧಿತ ಸೇವೆಗಳು, ಉತ್ಪನ್ನಗಳ ಪೂರೈಕೆ, ವ್ಯಾಪಾರ ಒಪ್ಪಂದಗಳನ್ನು ಇನ್‌ಗ್ರಾಂ ಮೈಕ್ರೊ ಸಂಸ್ಥೆ ನಡೆಸುತ್ತಿದೆ. ಇನ್‌ಗ್ರಾಂ ಕುರಿತಾದ ಇನ್ನಷ್ಟು ಮಾಹಿತಿ .. ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.