ಭಾರತದಲ್ಲಿ ಒಪ್ಪೊ ಸ್ಮಾರ್ಟ್‌ಫೋನ್‌ 'ರೆನೊ 3 ಪ್ರೊ' ಬಿಡುಗಡೆ: ಬೆಲೆ ₹29,990 ಚೀನಾ ಮೂಲದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಒಪ್ಪೊ ಸೋಮವಾರ ಭಾರತದಲ್ಲಿ 'ರೆನೊ 3 ಪ್ರೊ' ಆವೃತ್ತಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಆರಂಭಿಕ ಬೆಲೆ ₹29,990 ನಿಗದಿಯಾಗಿದೆ. 64ಎಂಪಿ ಲೆನ್ಸ್‌ ಸೇರಿದಂತೆ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿದೆ. ಸೆಲ್ಫಿ ಎಕ್ಸ್‌ಪರ್ಟ್‌ ಎಂದೇ ಕರೆದುಕೊಳ್ಳುವ ಒಪ್ಪೊ ತನ್ನ ಹೊಸ ಫೋನ್‌ನಲ್ಲಿ ಸೆಲ್ಫಿಗಾಗಿ44ಎಂಪಿ ಮತ್ತು 2ಎಂಪಿ ಡ್ಯೂಯಲ್‌ ಪಂಚ್‌ ಹೋಲ್‌ ಕ್ಯಾಮೆರಾ ನೀಡಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ 'ಕಲರ್‌ಒಎಸ್‌7' ಆಪರೇಟಿಂಗ್ ಸಿಸ್ಟಮ್‌ ಈ ಫೋನ್‌ನಲ್ಲಿ ಲಭ್ಯವಿದೆ. ಅರೋರಲ್‌ ಬ್ಲೂ, ಮಿಡ್‌ನೈಟ್‌ ಬ್ಲ್ಯಾಕ್‌ ಹಾಗೂ ಸ್ಕೈ ವೈಟ್‌ ಬಣ್ಣಗಳಲ್ಲಿ ಒಪ್ಪೊ ರೆನೊ 3 ಪ್ರೊ ಸಿಗಲಿದೆ. 8ಜಿಬ ರ್‍ಯಾಮ್‌, 128ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಫೋನ್‌ಗೆ ₹29,900 ನಿಗದಿಯಾಗಿದೆ. 8ಜಿಬಿ ರ್‍ಯಾಮ್‌, 256ಜಿಬಿ ಸಂಗ್ರಹ ಸಾಮರ್ಥ್ಯವಿರುವ ಫೋನ್‌ಗೆ ₹32,990 ಬೆಲೆ ಇದೆ. ಯುಎಸ್‌ಬಿ ಟೈಪ್‌–ಸಿ, ಬ್ಲೂಟೂಥ್‌ 5.1, ಡಾಲ್ಬಿ ಆಟಮ್ಸ್‌, ಆಂಡ್ರಾಯ್ಡ್‌ 10 ಆಧಾರಿತ ಕಲರ್‌ಎಸ್‌7 ಆಪರೇಟಿಂಗ್‌ ಸಿಸ್ಟಮ್‌ ಒಳಗೊಂಡಿದೆ. ಒಪ್ಪೊ ಭಾರತದಲ್ಲಿ ಎನ್ಕೊ ವೈರ್‌ಲೆಸ್‌ ಹೆಡ್‌ಫೋನ್‌ಗಳನ್ನೂ ಸಹ ಬಿಡುಗಡೆ ಮಾಡಿದೆ. #OPPOReno3Pro ’ 44MP # , 64MP - . , 4025mAh , P95 3.0. : ://./Umdka75tnL ../EMre0YveJ7 ಒಪ್ಪೊ ಹೊಸ ಫೋನ್‌ಗೆ ಇಂದಿನಿಂದಲೇ ಬುಕ್ಕಿಂಗ್‌ ಲಭ್ಯವಿದ್ದು, ಮಾರ್ಚ್‌ 6ರಿಂದ ಖರೀದಿಗೆ ಸಿಗಲಿದೆ. ಕೆಲವು ಬ್ಯಾಂಕ್‌ಗಳ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸಿ ಫೋನ್‌ ಖರೀದಿಸಿದರೆ ಶೇ 10ರಷ್ಟು ರಿಯಾಯಿತಿ ಇದೆ. ಹೊಸ ಫೋನ್‌ನಲ್ಲಿ ಏನೆಲ್ಲ ಇದೆ? ಡಿಸ್‌ಪ್ಲೇ: 6.4 ಇಂಚು ಫುಲ್‌ ಎಚ್‌ಡಿ+ ಅಮೋಲೆಡ್‌+ಗೊರಿಲ್ಲ ಗ್ಲಾಸ್‌ 5 ಸುರಕ್ಷತೆ ಪ್ರೊಸೆಸರ್‌: ಮೀಡಿಯಾಟೆಕ್‌ ಹೀಲಿಯೊ ಪಿ95 ಸಾಮರ್ಥ್ಯ: 8ಜಿಬಿ ರ್‍ಯಾಮ್‌ ಮತ್ತು 128ಜಿಬಿ/256ಜಿಬಿ ಸಂಗ್ರಹ ಕ್ಯಾಮೆರಾ: 64ಎಂಪಿ+8ಎಂಪಿ ಅಲ್ಟ್ರಾ ವೈಡ್‌ ಆ್ಯಂಗಲ್‌+13ಎಂಪಿ ಟೆಲಿಫೋಟೊ+2ಎಂಪಿ ಮೋನೊಕ್ರೋಮ್‌ ಸೆನ್ಸರ್‌; ಸೆಲ್ಫಿಗಾಗಿ 44ಎಂಪಿ+2ಎಂಪಿ ಬ್ಯಾಟರಿ: 4,025 ಎಂಎಎಚ್‌; 30ವ್ಯಾಟ್‌ ವೋಕ್‌ ಫ್ಲಾಷ್‌ ಜಾರ್ಜ್‌ ಬೆಲೆ: ₹29,900 / ₹32,990 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.