ರಿಯಲ್‌ಮಿ ಎಕ್ಸ್‌3, ಎಕ್ಸ್‌3 ಸೂಪರ್‌ಝೂಮ್ ಪ್ರಮುಖ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಆಗಿರುವ ರಿಯಲ್‌ಮಿ, ಭಾರತದ ಮಾರುಕಟ್ಟೆಗೆ ರಿಯಲ್‌ಮಿ ಎಕ್ಸ್‌3 ಮತ್ತು ಎಕ್ಸ್‌3 ಸೂಪರ್‌ಝೂಮ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ (ಐಒಟಿ) ವಿಭಾಗದಲ್ಲಿ ಟ್ರೂ ವೈರ್‌ಲೆಸ್‌ ಸ್ಟೀರಿಯೊ (ಟಿಡಬ್ಲ್ಯುಎಸ್‌), ಇಯರ್‌ಬಡ್ಸ್‌ ಮತ್ತು ಬ್ಯಾಕ್‌ಪ್ಯಾಕ್‌ ಸಹ ಬಿಡುಗಡೆ ಮಾಡಿದೆ. ಇಯರ್‌ಬಡ್ಸ್‌ ಬೆಲೆ ₹ 1,999 ಮತ್ತು ಬ್ಯಾಕ್‌ಪ್ಯಾಕ್‌ ಬೆಲೆ ₹ 1,499 ಇದೆ. ಇದೇ 30ರಿಂದ ರಿಯಲ್‌ಮಿ ಡಾಟ್‌ಕಾಂ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಆರಂಭವಾಗಲಿದೆ. ‘ಭಾರತದಲ್ಲಿ ವಹಿವಾಟು ಆರಂಭಿಸಿ ಜಗತ್ತಿನಾದ್ಯಂತ ವಿಸ್ತರಿಸಲಾಗಿದೆ. ಒಟ್ಟಾರೆ 27 ಮಾರುಕಟ್ಟೆಯಲ್ಲಿ ಕಂಪನಿಯ ಉತ್ಪನ್ನಗಳು ಲಭ್ಯ ಇವೆ. 2018ರಲ್ಲಿ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಆಗಿ ಪ್ರಯಾಣ ಆರಂಭಿಸಿ, ಇದೀಗ ಈ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಟ್ರೆಂಡ್‌ ಸೆಟರ್‌ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದ್ದೇವೆ’ ಎಂದು ರಿಯಲ್‌ಮಿ ಇಂಡಿಯಾದ ಸಿಇಒ ಮಾಧವ್‌ ಸೇಠ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.