C3: 10 ಲಕ್ಷ ಯೂನಿಟ್‍ ಮಾರಾಟ ಬೆಂಗಳೂರು: ಪೊಕೊ ಸಿ3 ಹ್ಯಾಂಡ್‌ಸೆಟ್‌ 10 ಲಕ್ಷಕ್ಕೂ ಅಧಿಕ ಮಾರಾಟ ಕಂಡಿದೆ ಎಂದು ಭಾರತದ 3ನೇ ಅತ್ಯಂತ ದೊಡ್ಡ ಆನ್‍ಲೈನ್ ಸ್ಮಾರ್ಟ್‍ಫೋನ್ ಬ್ರ್ಯಾಂಡ್‌ ಆಗಿರುವ ಪೊಕೊ ಗುರುವಾರ ತಿಳಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಪೊಕೊ ಸಿ3 ₹10000ಕ್ಕಿಂತ ಕಡಿಮೆ ಬೆಲೆಯ ವರ್ಗವನ್ನು ತನ್ನ ಸ್ವಚ್ಛ ಯುಐ ಮೂಲಕ ಮರು ವ್ಯಾಖ್ಯಾನಿಸಿದೆ. 6.53 ಇಂಚು ಎಚ್‌ಡಿ+ಎಲ್‍ಸಿಡಿಯಿಂದ ಹೀಲಿಯೊ ಜಿ35 ಚಿಪ್‍ಸೆಟ್‍, 5,000 ಎಂಎಎಚ್ ಬ್ಯಾಟರಿ, 13ಎಂಪಿ ಟ್ರಿಪಲ್ ಕ್ಯಾಮರಾ ಸೆಟಪ್ ಮತ್ತು 5ಎಂಪಿ ಫ್ರಂಟ್ ಕ್ಯಾಮರಾ ಹೊಂದಿದೆ. ಕೈಗೆಟಕುವ ಬೆಲೆಗಳಲ್ಲಿ ಈ ವರ್ಗದ ಅತ್ಯುತ್ತಮ ಉತ್ಪನ್ನವನ್ನು ತರುವ ಮೂಲಕ ಗ್ರಾಹಕರನ್ನು ಸಂತೃಪ್ತಗೊಳಿಸುವುದನ್ನು ಮುಂದುವರಿಸುತ್ತಿರುವ ಪೊಕೊ ಸಿ3 ದೇಶದಲ್ಲಿ ಆನ್‍ಲೈನ್‍ನಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವ ಟಾಪ್ 3 ಫೋನ್‍ಗಳ ಪಟ್ಟಿಯಲ್ಲಿ ಸೇರಿದೆ. ನಿಯಮಿತ ಮಾರಾಟ ಬೆಲೆ ₹ 8,499(4/64ಜಿಬಿ) ಮತ್ತು ₹ 7,499(3/32ಜಿಬಿ) ಹೊಂದಿರುವ ಪೊಕೊ ಸಿ3 ಕ್ರಮವಾಗಿ ವಿಶೇಷ ರಿಯಾಯಿತಿ ಬೆಲೆ ₹ 7,999 ಮತ್ತು ₹ 6,999ಗಳಿಗೆ ದೊರೆಯುತ್ತದೆ. ಜನವರಿ 24ರವರೆಗೆ ಪೊಕೊ ಸಿ3ಯ 3ಜಿಬಿ/32ಜಿ ವೇರಿಯೆಂಟ್ ಅನ್ನು ₹ 6,299 ಮತ್ತು 4ಜಿಬಿ/64ಜಿಬಿ ವೇರಿಯೆಂಟ್ ಅನ್ನು ₹ 7,199ಕ್ಕೆ(ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡು) ಫ್ಲಿಪ್‍ಕಾರ್ಟ್‌ನಲ್ಲಿಪಡೆಯಬಹುದು ಎಂದು ತಿಳಿಸಿದೆ. ಇದನ್ನೂ ಓದಿ:ಥಾಮ್ಸನ್‌ ಪಾಥ್‌ ಆ್ಯಂಡ್ರಾಯ್ಡ್‌ ಟಿವಿಗಳು ಬಿಡುಗಡೆ: ಜ.20ರಿಂದ ಮಾರಾಟ ಆರಂಭ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.