ಸ್ಯಾಮ್‌ಸಂಗ್ ಗ್ಯಾಲಕ್ಸಿ ‘ಎಂ’ ಸರಣಿ ಸ್ಮಾರ್ಟ್‌ಫೋನ್ ಬೆಲೆ ಏರಿಕೆ ಬೆಂಗಳೂರು: ಸ್ಯಾಮ್‌ಸಂಗ್ ಗ್ಯಾಲಕ್ಸಿ ‘ಎಂ’ ಸರಣಿಯಲ್ಲಿ ಬಿಡುಗಡೆಯಾಗಿದ್ದ ಸ್ಮಾರ್ಟ್‌ಫೋನ್ ಒಂದರ ಬೆಲೆ ದೇಶದಲ್ಲಿ ಏರಿಕೆಯಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ02 ಸ್ಮಾರ್ಟ್‌ಫೋನ್ ಎರಡೂ ಆವೃತ್ತಿಯ ಬೆಲೆ ₹1,000 ಏರಿಕೆಯಾಗಿದೆ. ಗ್ಯಾಲಕ್ಸಿ ಎಂ02 ಸ್ಯಾಮ್‌ಸಂಗ್ ‘ಎಂ’ ಸರಣಿಯಲ್ಲಿ ಪರಿಚಯಿಸಿದ್ದ ಗ್ಯಾಲಕ್ಸಿ ಎಂ02, 2 + 32 ಆವೃತ್ತಿ ದರ ಮೊದಲು ₹6,999 ಇದ್ದು, ₹1,000 ಬೆಲೆ ಏರಿಕೆ ಬಳಿಕ, ₹7,999 ಆಗಿದೆ. ಅಲ್ಲದೆ, ಗ್ಯಾಲಕ್ಸಿ ಎಂ02, 3 + 32 ಮಾದರಿ ದರ ಮೊದಲು ₹7,499 ಇದ್ದಿದ್ದು, ₹1,000 ಬೆಲೆ ಏರಿಕೆ ಬಳಿಕ ₹8,499 ರೂ. ಆಗಿದೆ. ವಿವೊ ವೈ ಸರಣಿ ಸ್ಮಾರ್ಟ್‌ಫೋನ್ ದರ ಏರಿಕೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ02, 6.5 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಕ್ವಾಡ್ ಕೋರ್ ಮೀಡಿಯಾಟೆಕ್ MT6739 ಪ್ರೊಸೆಸರ್, 13+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಹೊಂದಿದೆ. G20: ಆಕರ್ಷಕ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ನೋಕಿಯಾ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.