ಮಾರುಕಟ್ಟೆಗೆ ಬಂತು ಹೊಸ ನೋಕಿಯಾ ಸ್ಮಾರ್ಟ್‌ಫೋನ್ ಬೆಂಗಳೂರು: ಮೊಬೈಲ್ ಮಾರುಕಟ್ಟೆಯ ಜನಪ್ರಿಯ ಬ್ರ್ಯಾಂಡ್ ನೋಕಿಯಾ, ಮೂರು ಹೊಸ ಮಾದರಿಗಳನ್ನು ಪರಿಚಯಿಸಿದೆ. ನೋಕಿಯಾ ಮೊಬೈಲ್ಸ್ ಸರಣಿಯಲ್ಲಿ ನೋಕಿಯಾ XR20, ನೋಕಿಯಾ 6310 ಮತ್ತು ನೋಕಿಯಾ C30 ಬಿಡುಗಡೆಯಾಗಿದೆ. ಜತೆಗೆ ಹೊಸ ಇಯರ್‌ಬಡ್ಸ್ ಕೂಡ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಫಿನ್‌ಲ್ಯಾಂಡ್ಮೂಲಕ ನೋಕಿಯಾ, ಪ್ರಸ್ತುತ ಎಚ್‌ಎಂಡಿ ಗ್ಲೋಬಲ್ ಒಡೆತನದಲ್ಲಿದೆ. ನೋಕಿಯಾ XR20 ಮತ್ತು ನೋಕಿಯಾ C30 ಸ್ಮಾರ್ಟ್‌ಫೋನ್‌ಗಳಾಗಿದ್ದರೆ, ನೋಕಿಯಾ 6310 ಬೇಸಿಕ್ ಫೀಚರ್ ಫೋನ್ ಆಗಿದ್ದು, 2021ರ ಆವೃತ್ತಿಯಾಗಿದೆ. ಮೂರು ಹೊಸ ಮಾದರಿಗಳು ದೇಶದ ಮಾರುಕಟ್ಟೆಯನ್ನು ಶೀಘ್ರದಲ್ಲೇ ಪ್ರವೇಶಿಸಲಿದ್ದು, ಬೆಲೆ ವಿವರವನ್ನು ಕಂಪನಿ ಇನ್ನಷ್ಟೇ ಪ್ರಕಟಿಸಲಿದೆ. ನೋಕಿಯಾ XR20 ಸ್ಮಾರ್ಟ್‌ಫೋನ್ 4GB + 64GB ಹಾಗೂ 6GB + 128 ಎಂಬ ಎರಡು ಮಾದರಿಗಳಲ್ಲಿ ದೊರೆಯಲಿದೆ. ನೂತನ ಒಪ್ಪೊ 5G ಸ್ಮಾರ್ಟ್‌ಫೋನ್ ಬಿಡುಗಡೆ: ದೇಶದಲ್ಲಿ ಬೆಲೆ ಎಷ್ಟಿದೆ? ನೋಕಿಯಾ C30 ಫೋನ್ 2GB + 32GB, 3GB + 32GB ಮತ್ತು 3GB + 64GB ಎಂಬ ಮೂರು ಆವೃತ್ತಿಗಳಲ್ಲಿ ಲಭ್ಯವಾಗಲಿದೆ. ಗ್ಯಾಜೆಟ್ ಮಾರುಕಟ್ಟೆಗೆ ಬಂತು ಪೋಕೊ ಹೊಸ ಸ್ಮಾರ್ಟ್‌ಫೋನ್ ನೋಕಿಯಾ 6310 ಮೊಬೈಲ್ 2021 ಆವೃತ್ತಿ ಕಪ್ಪು, ಹಸಿರು, ನೀಲಿ ಮತ್ತು ಹಳದಿ ಬಣ್ಣಗಳಲ್ಲಿ ದೊರೆಯಲಿದ್ದು, ಅಂದಾಜು ₹3,500 ದರ ಹೊಂದಿರಲಿದೆ. 110 4G: ಹೊಸ ಫೀಚರ್ ಫೋನ್ ಪರಿಚಯಿಸಿದ ನೋಕಿಯಾ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.