ಸ್ಮಾರ್ಟ್ ಗ್ಲಾಸ್ ಪರಿಚಯಿಸಿದ ಶಿಯೋಮಿ ರೆಡ್ಮಿ: ಫೋನ್ ಕರೆ, ಕ್ಯಾಮರಾ ಸೌಲಭ್ಯ ಬೆಂಗಳೂರು: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಸರು ಗಳಿಸಿರುವ ಶಿಯೋಮಿ ಕಂಪನಿ, ಹೊಸ ಸ್ಮಾರ್ಟ್ ಗ್ಲಾಸ್ ಬಿಡುಗಡೆ ಮಾಡಿದೆ. ಫೋನ್ ಕರೆ ಮಾಡುವ ಸೌಲಭ್ಯ, ಫೋಟೊ ಕ್ಲಿಕ್ ಮಾಡುವ ಅವಕಾಶ, ನ್ಯಾವಿಗೇಷನ್ ಆಯ್ಕೆಗಳನ್ನು ಶಿಯೋಮಿ ಸ್ಮಾರ್ಟ್‌ ಗ್ಲಾಸ್ ಹೊಂದಿದೆ. ಜತೆಗೆ ಬರಹವನ್ನು ಅನುವಾದಿಸುವ ಆಯ್ಕೆ ಕೂಡ ಶಿಯೋಮಿ ಸ್ಮಾರ್ಟ್ ಗ್ಲಾಸ್‌ನಲ್ಲಿದೆ. ನೋಡಲು ಸಾಮಾನ್ಯ ಕನ್ನಡಕದಂತೆ ಕಾಣಿಸಿದರೂ, ಇದರಲ್ಲಿ ಸೆನ್ಸರ್‌ಗಳಿದ್ದು, ವಿವಿಧ ಸ್ಮಾರ್ಟ್‌ ಫೀಚರ್‌ಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಫೇಸ್‌ಬುಕ್ ಇತ್ತೀಚೆಗೆ ಪರಿಚಯಿಸಿದ್ದ ರೇ-ಬಾನ್ ಸ್ಟೋರೀಸ್ ಸ್ಮಾರ್ಟ್‌ ಗ್ಲಾಸಸ್‌ ಮಾದರಿಯಲ್ಲಿಯೇ ಶಿಯೋಮಿ ರೆಡ್ಮಿ ಸ್ಮಾರ್ಟ್ ಗ್ಲಾಸ್ ಮಾರುಕಟ್ಟೆಯಲ್ಲಿ ದೊರೆಯಲಿದೆ. ದೇಶದಲ್ಲಿ ಶಿಯೋಮಿ ರೆಡ್ಮಿ ಸ್ಮಾರ್ಟ್‌ಫೋನ್ ಬೆಲೆ ಏರಿಕೆ ನೂತನ ಸ್ಮಾರ್ಟ್ ಗ್ಲಾಸ್ ಲಭ್ಯತೆ ಮತ್ತು ಬೆಲೆ ವಿವರವನ್ನು ಶಿಯೋಮಿ ಕಂಪನಿ ಬಹಿರಂಗಪಡಿಸಿಲ್ಲ. 10 : ಶಿಯೋಮಿ ನೂತನ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.