ದೇಶದ ಮಾರುಕಟ್ಟೆಗೆ ಬಿಡುಗಡೆಯಾಯ್ತು ಹೊಸ ಪೋಕೊ ಸ್ಮಾರ್ಟ್‌ಫೋನ್ ಬೆಂಗಳೂರು: ಗ್ಯಾಜೆಟ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಪೋಕೊ, ದೇಶದಲ್ಲಿ ಹೊಸ ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಪೋಕೊ ಸಿ ಸರಣಿಯಲ್ಲಿ ಹೊಸ C31 ಪರಿಚಯಿಸಲ್ಪಟ್ಟಿದ್ದು, ಬಜೆಟ್ ದರ ಹೊಂದಿದೆ. ಮೀಡಿಯಾಟೆಕ್ ಹೆಲಿಯೊ G35 ಪ್ರೊಸೆಸರ್ ಇದರಲ್ಲಿದೆ. ಬೆಲೆ ಮತ್ತು ಲಭ್ಯತೆ ಪೋಕೊ C31 ಸ್ಮಾರ್ಟ್‌ಫೋನ್ 3 + 32 ಮಾದರಿಗೆ ದೇಶದಲ್ಲಿ ₹8,499 ಮತ್ತು 4 + 64 ಆವೃತ್ತಿಗೆ ₹9,499 ದರ ನಿಗದಿಪಡಿಸಲಾಗಿದೆ. ಅಕ್ಟೋಬರ್ 3ರಿಂದ ಆರಂಭವಾಗುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ಮೂಲಕ ನೂತನ ಪೋಕೊ C31 ದೊರೆಯಲಿದ್ದು, ಶಾಡೋ ಗ್ರೇ ಮತ್ತು ರಾಯಲ್ ಬ್ಲೂ ಎಂಬ ಮೂರು ಬಣ್ಣಗಳ ಆಯ್ಕೆಯಿದೆ. ಜತೆಗೆ ಆರಂಭಿಕ ಕೊಡುಗೆಯಾಗಿ ₹500 ರಿಯಾಯಿತಿಯೂ ಇರಲಿದೆ ಎಂದು ಕಂಪನಿ ಹೇಳಿದೆ. 6 : ಹಬ್ಬದ ಸೀಸನ್‌ಗೆ ವಿಶೇಷ ಆವೃತ್ತಿ ಸ್ಮಾರ್ಟ್‌ಫೋನ್ ಪರಿಚಯಿಸಿದ ಒಪ್ಪೊ ಪೋಕೊ C31 6.53 ಇಂಚಿನ ಡಿಸ್‌ಪ್ಲೇ, ಹಿಂಭಾಗದಲ್ಲಿ 13 + 2 + 2 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ. ಜತೆಗೆ 5000mAh ಬ್ಯಾಟರಿ ಬೆಂಬಲವೂ ಇದೆ. M3: ಮೊದಲ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಫ್ಲಿಪ್‌ಕಾರ್ಟ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.