: ಶಓಮಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಬೆಂಗಳೂರು: ಶಓಮಿ ಕಂಪನಿ ತನ್ನ ರೆಡ್ಮಿ ನೋಟ್ ಸರಣಿಯಲ್ಲಿ ನೂತನ ಮಾದರಿಯನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದೆ. ರೆಡ್ಮಿ 11T 5G ಮಂಗಳವಾರ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹಿಂಬದಿಯಲ್ಲಿ ಎರಡು ಕ್ಯಾಮರಾ ವ್ಯವಸ್ಥೆ, ಪಂಚ್ ಹೋಲ್ ಡಿಸ್‌ಪ್ಲೇ, ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಬೆಲೆ ಮತ್ತು ಲಭ್ಯತೆ ನೂತನ ರೆಡ್ಮಿ ನೋಟ್ 11T 5G ಸ್ಮಾರ್ಟ್‌ಫೋನ್, ದೇಶದಲ್ಲಿ 6 + 64 ಆರಂಭಿಕ ಮಾದರಿಗೆ ₹16,999 ದರ ಹೊಂದಿದೆ. 6 + 128 ಆವೃತ್ತಿಗೆ ₹17,999 ಮತ್ತು 8 + 128 ಮಾದರಿಗೆ ₹19,999 ಬೆಲೆ ಹೊಂದಿದೆ. ಅಕ್ವಾಮೆರಿನ್ ಬ್ಲೂ, ಮ್ಯಾಟ್ ಬ್ಲ್ಯಾಕ್ ಮತ್ತು ಸ್ಟಾರ್‌ಡಸ್ಟ್ ವೈಟ್ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ನೂತನ ಮಾದರಿ ಡಿಸೆಂಬರ್ 7ರಿಂದ ಅಮೆಜಾನ್ ಮತ್ತು ಎಂಐ.ಹೋಮ್, ಶಓಮಿ ಆನ್‌ಲೈನ್ ಮೂಲಕ ದೊರೆಯಲಿದೆ. : ಶಓಮಿ ಬ್ಲ್ಯಾಕ್ ಫ್ರೈಡೇ ವಿಶೇಷ ಆಫರ್ ಮಾರಾಟ 6.6 ಇಂಚಿನ ಫುಲ್ ಎಚ್‌ಡಿ ಡಿಸ್‌ಪ್ಲೇ, 50+8 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ. 5,000mAh ಬ್ಯಾಟರಿ ಬೆಂಬಲವಿದೆ. ನೋಕಿಯಾ ಸಿ30: ಅಗ್ಗದ, ದೀರ್ಘಾವಧಿ ಬ್ಯಾಟರಿ ಬಾಳಿಕೆಯ ಸ್ಮಾರ್ಟ್‌ಫೋನ್‌ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.