ಗ್ಯಾಜೆಟ್‌ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದ ಟೆಕ್ನೋ ಬೆಂಗಳೂರು: ಕಡಿಮೆ ಬೆಲೆಗೆ ಉತ್ತಮ ಫೀಚರ್‌ಗಳಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಹೆಸರು ಗಳಿಸಿರುವ ಟೆಕ್ನೋ, ಹೊಸ ಮಾದರಿಯನ್ನು ದೇಶದಲ್ಲಿ ಪರಿಚಯಿಸಿದೆ. ಟೆಕ್ನೋ ಪಾಪ್ 5 ಸರಣಿಯಲ್ಲಿ ಹೊಸ ಪಾಪ್ 5 ಎಲ್‌ಟಿಇ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. 5000ಎಂಎಎಚ್ ಬ್ಯಾಟರಿ, 6.52 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಈ ಸ್ಮಾರ್ಟ್‌ಫೋನ್ ವಿಶೇಷತೆಯಾಗಿದೆ. ತಾಂತ್ರಿಕ ವೈಶಿಷ್ಟ್ಯ ಟೆಕ್ನೋ ಪಾಪ್ 5 ಎಲ್‌ಟಿಇ ಮಾದರಿಯಲ್ಲಿ 6.52 ಇಂಚಿನ ಎಚ್‌ಡಿ+ ಡಾಟ್ ನಾಚ್ ಸಹಿತ ಡಿಸ್‌ಪ್ಲೇ, 5000mAh ಬ್ಯಾಟರಿ ಮತ್ತು 8 ಮೆಗಾಪಿಕ್ಸೆಲ್ ಡ್ಯುಯಲ್ ಹಿಂಬದಿ ಕ್ಯಾಮೆರಾ ಇದೆ. ಹಾಗೂ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ ಎಂದು ಕಂಪನಿ ತಿಳಿಸಿದೆ. ಆಂಡ್ರಾಯ್ಡ್ 11 ಗೊ ಆಧಾರಿತ 7.6 ಕಾರ್ಯಚರಣೆ ವ್ಯವಸ್ಥೆ ಇದರಲ್ಲಿದ್ದು, 2 ಮತ್ತು 32 ಸ್ಟೋರೇಜ್ ಒಳಗೊಂಡಿದೆ. ಏಸಸ್ ಕ್ರೋಮ್‌ಬುಕ್: ವರ್ಕ್ ಫ್ರಮ್‌ ಹೋಮ್‌ಗೆ ಸೂಕ್ತ ಲ್ಯಾಪ್‌ಟಾಪ್ ಬಿಡುಗಡೆ ಬೆಲೆ ಮತ್ತು ಲಭ್ಯತೆ ಅಮೆಜಾನ್ ಮೂಲಕ ಜನವರಿ 16ರಿಂದ ಹೊಸ ಟೆಕ್ನೋ ಪಾಪ್ 5 ಎಲ್‌ಟಿಇ ಸ್ಮಾರ್ಟ್‌ಫೋನ್ ದೊರೆಯಲಿದ್ದು, ₹6,299 ಆರಂಭಿಕ ವಿಶೇಷ ದರ ಹೊಂದಿದೆ ಎಂದು ಕಂಪನಿ ಹೇಳಿದೆ. ಗ್ಯಾಜೆಟ್ ಮಾರುಕಟ್ಟೆಗೆ ಪ್ಯಾನಸೋನಿಕ್ ಟಫ್‌ಬುಕ್ ಟ್ಯಾಬ್ಲೆಟ್: ಬೆಲೆ ವಿವರ # 5 , . - 5000mAh - 6.52 + - - 8MP ../rJUvFqRF5n ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.