19: ಫೋಟೊಗ್ರಫಿ ಪ್ರಿಯರಿಗಾಗಿ ಆಕರ್ಷಕ ಸ್ಮಾರ್ಟ್‌ಫೋನ್ ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಈಗಾಗಲೇ ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿರುವ ಟೆಕ್‌ನೊ, ಆಕರ್ಷಕ ವಿನ್ಯಾಸದ ನೂತನ ಕ್ಯಾಮನ್ 19 ಬಿಡುಗಡೆ ಮಾಡಿದೆ. ಸ್ಮಾರ್ಟ್‌ಪೋನ್ ಫೋಟೊಗ್ರಫಿ ಪ್ರಿಯರನ್ನು ಗಮನದಲ್ಲಿರಿಸಿಕೊಂಡು ಈ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಹೇಳಿದೆ. ತನ್ನ ವರ್ಗದಲ್ಲೇ ಮೊದಲ ಬಾರಿಗೆ ಸೆನ್ಸರ್ ಸಹಿತ 64 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮೆರಾವನ್ನು ಟೆಕ್‌ನೊ ಪರಿಚಯಿಸಿದೆ. ಟೆಕ್‌ನೊ ಕ್ಯಾಮನ್ 19 ಜತೆಗೆ ಟೆಕ್‌ನೊ ಕ್ಯಾಮನ್ 19 ನಿಯೊ ಕೂಡ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಟೆಕ್‌ನೊ ಕ್ಯಾಮನ್ 19 6GB LPDDR4x ಮತ್ತು 5GB ಜತೆಗೆ 128GB ಸ್ಟೋರೇಜ್ ಹೊಂದಿದೆ. 6.8 ಇಂಚಿನ ಫುಲ್‌ಎಚ್‌ಡಿ ಡಿಸ್‌ಪ್ಲೇ, G85 ಸೂಪರ್‌ಫಾಸ್ಟ್ ಪ್ರೊಸೆಸರ್, 18W ಸೇಫ್ ಚಾರ್ಜರ್ ಜತೆಗೆ 5000mAh ಬ್ಯಾಟರಿ ಇದರಲ್ಲಿದೆ. 64 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮೆರಾ ಟೆಕ್‌ನೊ ಕ್ಯಾಮನ್ 19 ವಿಶೇಷತೆಯಾಗಿದ್ದು, 16 ಮೆಗಾಪಿಕ್ಸೆಲ್ ಸೆಲ್ಫಿ ಇದರ ವಿಶೇಷತೆ ಎಂದು ಕಂಪನಿ ತಿಳಿಸಿದೆ. 8P ಬಿಡುಗಡೆ; ಬೆಲೆ, ವೈಶಿಷ್ಟ್ಯಗಳು ಬೆಲೆ ವಿವರ ನೂತನ ಟೆಕ್‌ನೊ ಕ್ಯಾಮನ್ 19 ಇಕೊ ಬ್ಲ್ಯಾಕ್, ಸೀ ಸಾಲ್ಟ್ ವೈಟ್ ಮತ್ತು ಜಿಯೊಮೆಟ್ರಿಕ್ ಗ್ರೀನ್ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ದೊರೆಯಲಿದ್ದು, ₹14,999 ದರಕ್ಕೆ ಲಭ್ಯವಾಗಲಿದೆ. 22 : ಜಾಗತಿಕ ಮಾರುಕಟ್ಟೆಗೆ ಮತ್ತೆ ಎಂಟ್ರಿ ಕೊಟ್ಟ ಎಚ್‌ಟಿಸಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.