ಗ್ಯಾಜೆಟ್ ಮಾರುಕಟ್ಟೆಗೆ ಐಕ್ಯೂ ಹೊಸ ಸ್ಮಾರ್ಟ್‌ಫೋನ್‌ ಗ್ಯಾಜೆಟ್ ಮಾರುಕಟ್ಟೆಗೆ ಐಕ್ಯೂ ನೂತನ ಪ್ರೀಮಿಯಂ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಐಕ್ಯೂ 9T ( 9T) ಅಲ್ಫಾ ಬ್ಲ್ಯಾಕ್ ಮತ್ತು ವೈಟ್ ಲೆಜೆಂಡ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿದೆ. 6.78 ಇಂಚಿನ ಫುಲ್‌ಎಚ್‌ಡಿ ಅಮೊಲೆಡ್ ಡಿಸ್‌ಪ್ಲೇ, ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಸ 9T ಸ್ಮಾರ್ಟ್‌ಫೋನ್‌ನ ವಿಶೇಷತೆಯಾಗಿದೆ. 3.2Ghz ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 8+ ಜೆನ್. 1 ಒಕ್ಟಾ–ಕೋರ್ ಪ್ರೊಸೆಸರ್ ಇದ್ದು, ಅಡ್ರೆನೊ 730 ಗ್ರಾಫಿಕ್ಸ್ ಬೆಂಬಲವಿದೆ. ಆ್ಯಂಡ್ರಾಯ್ಡ್ 12 ಆಧಾರಿತ ಫನ್‌ಟಚ್ ಓಎಸ್ 23 ನೂತನ 9T ಸ್ಮಾರ್ಟ್‌ಫೋನ್‌ನಲ್ಲಿದ್ದು, 8 ಮತ್ತು 12GB LPDDR5 6400Mbps ಹಾಗೂ 128 ಹಾಗೂ 256 ಮೆಮೊರಿ ಆಯ್ಕೆಯ ಜತೆಗೆ, 4,700mAh ಬ್ಯಾಟರಿ ಮತ್ತು 120W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 13+12 ಮೆಗಾಪಿಕ್ಸೆಲ್ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. 5710 : ವೈರ್‌ಲೆಸ್ ಇಯರ್‌ಬಡ್ಸ್ ಸಹಿತ ಬರಲಿದೆ ಐಕಾನಿಕ್ ನೋಕಿಯ ಬೆಲೆ ವಿವರ: 8GB + 128GB ಮಾದರಿಗೆ ₹49,999 ಹಾಗೂ 12GB + 256GB ಆವೃತ್ತಿಗೆ ₹54,999 ದರ ಹೊಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.