| ಆ್ಯಪಲ್ ಐಫೋನ್ 14 ಬಿಡುಗಡೆ ದಿನಾಂಕ ಘೋಷಣೆ ಬೆಂಗಳೂರು: ಟೆಕ್ ಲೋಕದ ಪ್ರಮುಖ ಸಂಸ್ಥೆ ಆ್ಯಪಲ್, ನೂತನ ಐಫೋನ್ 14 ಸರಣಿ ಬಿಡುಗಡೆಗೆ ದಿನಾಂಕ ಪ್ರಕಟಿಸಿದೆ. ಸೆಪ್ಟೆಂಬರ್ 7 ರಂದು ಆ್ಯಪಲ್ ಈವೆಂಟ್ ನಡೆಯಲಿದ್ದು, ಈ ಬಾರಿಯೂ ಲೈವ್‌ಸ್ಟ್ರೀಮ್ ಕಾರ್ಯಕ್ರಮ ಇರಲಿದೆ. ಸ್ಥಳೀಯ ಕಾಲಮಾನ ರಾತ್ರಿ 10.30ಕ್ಕೆ ಆ್ಯಪಲ್ ಈವೆಂಟ್ ನಡೆಯಲಿದೆ. ಆ್ಯಪಲ್ ಕ್ಯಾಲಿಫೋರ್ನಿಯಾದ ಪ್ರಧಾನ ಕಚೇರಿಯಿಂದ ಕಾರ್ಯಕ್ರಮ ನೇರಪ್ರಸಾರವಾಗಲಿದೆ. ಈ ವರ್ಷ, ಆ್ಯಪಲ್ ಐಫೋನ್ 14 ಸರಣಿಯಲ್ಲಿ ಹೊಸದಾಗಿ ನಾಲ್ಕು ಮಾದರಿಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಐಫೋನ್ 14, ಐಫೋನ್ 14 ಮ್ಯಾಕ್ಸ್ ಮತ್ತು ಪ್ರೊ ಸರಣಿಯಲ್ಲಿ ಐಫೋನ್ 14 ಪ್ರೊ ಹಾಗೂ ಐಫೋನ್ 14 ಪ್ರೊ ಮ್ಯಾಕ್ಸ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಪ್ರೊ ಸರಣಿಯಲ್ಲಿ ಹೆಚ್ಚುವರಿ ಕ್ಯಾಮೆರಾ ವೈಶಿಷ್ಟ್ಯಗಳನ್ನು ಆ್ಯಪಲ್ ಅಳವಡಿಸಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. : ಎಂ1 ಚಿಪ್ ಸಹಿತ ಆಕರ್ಷಕ ಐಪ್ಯಾಡ್ ಪರಿಚಯಿಸಿದ ಆ್ಯಪಲ್ ಉಳಿದಂತೆ, ಆ್ಯಪಲ್ ವಾಚ್ ಸಿರೀಸ್ 8 ಬಿಡುಗಡೆಯಾಗುವ ನಿರೀಕ್ಷೆಯಿದೆ. 16: ಹೊಸ ಓಎಸ್ ಪರಿಚಯಿಸಿದ ಆ್ಯಪಲ್; ಯಾವೆಲ್ಲ ಐಫೋನ್‌ಗೆ ಲಭ್ಯ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.