ದೇಶದ ಮಾರುಕಟ್ಟೆಗೆ ಹೊಸ ಒನ್‌ಪ್ಲಸ್ 10R ಸ್ಮಾರ್ಟ್‌ಫೋನ್ ಬಿಡುಗಡೆ ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಒನ್‌ಪ್ಲಸ್ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಹೊಸ ಸರಣಿಯಲ್ಲಿ ಒನ್‌ಪ್ಲಸ್ 10R ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಬೆಲೆ ಮತ್ತು ವೈಶಿಷ್ಟ್ಯಗಳ ವಿವರ ಇಲ್ಲಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಒನ್‌ಪ್ಲಸ್ 10R ಬಿಡುಗಡೆಯಾಗಿದ್ದು, 6.7 ಇಂಚಿನ ಫುಲ್‌ಎಚ್‌ಡಿ+ ಅಮೊಲಿಡ್ ಡಿಸ್‌ಪ್ಲೇ ಹೊಂದಿದೆ. ಜತೆಗೆ ಇನ್‌–ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಒಳಗೊಂಡಿದೆ. ಮೀಡಿಯಾಟೆಕ್ ಡೈಮನ್ಸಿಟಿ 8100 ಮ್ಯಾಕ್ಸ್ ಸಿಲಿಕಾನ್ ಪ್ರೊಸೆಸರ್ ಜತೆಗೆ ಮಾಲಿ–G510 MC6 ಗ್ರಾಫಿಕ್ಸ್ ಬೆಂಬಲ ಹೊಸ ಒನ್‌ಪ್ಲಸ್ 10R ಸ್ಮಾರ್ಟ್‌ಫೋನ್‌ನಲ್ಲಿದೆ ಎಂದು ಕಂಪನಿ ಹೇಳಿದೆ. 5,000mAh ಬ್ಯಾಟರಿ ಮತ್ತು 80W ಹಾಗೂ 150W ಫಾಸ್ಟ್ ಚಾರ್ಜಿಂಗ್ ಬೆಂಬಲ ಇರಲಿದ್ದು, ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 8 + 2 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಇರಲಿದೆ. 8 + 128 ಸ್ಟೋರೇಜ್ ಆವೃತ್ತಿ ಹಾಗೂ 12 + 256 ಆವೃತ್ತಿ ಇದ್ದು, ಕ್ರಮವಾಗಿ ₹38,999 ಹಾಗೂ ₹42,999 ದರ ಹೊಂದಿದೆ. ಶಓಮಿ ಎಂಐ ಪ್ಯಾಡ್ 5 ಬಿಡುಗಡೆ: ವೈಶಿಷ್ಟ್ಯಗಳು, ಬೆಲೆ ವಿವರ ಇಲ್ಲಿದೆ.. ಮೇ 4ರಿಂದ ಅಮೆಜಾನ್ ಮತ್ತು ಒನ್‌ಪ್ಲಸ್ ಸ್ಟೋರ್ ಮೂಲಕ ನೂತನ ಫೋನ್ ಲಭ್ಯವಾಗಲಿದೆ. F21 : ಆಕರ್ಷಕ ವಿನ್ಯಾಸದ ಸ್ಮಾರ್ಟ್‌ಫೋನ್ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.