: ನೂತನ ಐಫೋನ್, ವಾಚ್ ಬಿಡುಗಡೆಯಾಗುವ ನಿರೀಕ್ಷೆ ಬೆಂಗಳೂರು: ಆ್ಯಪಲ್ ವಾರ್ಷಿಕ ವಿಶೇಷ ಈವೆಂಟ್ ಸೆಪ್ಟೆಂಬರ್ 7ರ ಬುಧವಾರದಂದು ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10.30ಕ್ಕೆ ವಿಶೇಷ ಈವೆಂಟ್ ಆರಂಭವಾಗಲಿದ್ದು, ಈ ಬಾರಿಯೂ ಆ್ಯಪಲ್ ಆನ್‌ಲೈನ್ ಮೂಲಕವೇ ಹೊಸ ಉತ್ಪನ್ನಗಳನ್ನು ಘೋಷಿಸಲು ಮುಂದಾಗಿದೆ. ಆ್ಯಪಲ್, ನೂತನ ಸರಣಿಯಲ್ಲಿ ಐಫೋನ್ 14 ಘೋಷಿಸುವ ನಿರೀಕ್ಷೆಯಿದೆ. ಐಫೋನ್ 14 ಸರಣಿಯಲ್ಲಿ ಹೊಸದಾಗಿ ನಾಲ್ಕು ಮಾದರಿಗಳು ಬಿಡುಗಡೆಯಾಗಲಿದೆ ಎನ್ನಲಾಗಿದೆ. ಆ್ಯಪಲ್ ಅಧಿಕೃತ ವೆಬ್ ತಾಣ ಮತ್ತು ಯೂಟ್ಯೂಬ್ ಮೂಲಕ ಆ್ಯಪಲ್ ಈವೆಂಟ್ ಪ್ರಸಾರವಾಗಲಿದೆ. 13 | ಚೀನಾದಲ್ಲಿ ಆ್ಯಪಲ್ ಐಫೋನ್ ಮಾರಾಟ ಹೆಚ್ಚಳ ಐಫೋನ್ ಜತೆಗೆ, ಆ್ಯಪಲ್ ವಾಚ್ ಸಿರೀಸ್ 8, ನೂತನ ಏರ್‌ಪಾಡ್ಸ್ ಕೂಡ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.