: ಭಾರತದ ಮಾರುಕಟ್ಟೆಗೆ ಕಂಪ್ಯೂಟರ್ ಮಾನಿಟರ್ ಬಿಡುಗಡೆ ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಒನ್‌ಪ್ಲಸ್ ನೂತನ ಕಂಪ್ಯೂಟರ್ ಮಾನಿಟರ್ ಪರಿಚಯಿಸಿದೆ. ಒನ್‌ಪ್ಲಸ್ ಎಕ್ಸ್ ಮತ್ತು ಇ ಸರಣಿಯಲ್ಲಿ ನೂತನ ಮಾನಿಟರ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಒನ್‌ಪ್ಲಸ್ X27 ಎನ್ನುವುದು 27 ಇಂಚಿನ ಗೇಮಿಂಗ್ ಮಾನಿಟರ್ ಆಗಿದೆ. ಮತ್ತೊಂದು ಇ ಸರಣಿಯಲ್ಲಿ ಹೊಸದಾಗಿ E24 ಮಾದರಿ ಬಿಡುಗಡೆಯಾಗಿದೆ. ಒನ್‌ಪ್ಲಸ್ X27 ಮಾನಿಟರ್‌ ದರ ದೇಶದಲ್ಲಿ ₹27,999 ಇದ್ದು, ಡಿ. 15ರಿಂದ ಒನ್‌ಪ್ಲಸ್ ಆನ್‌ಲೈನ್ ಸ್ಟೋರ್ ಮೂಲಕ ಲಭ್ಯವಾಗಲಿದೆ. ಅಲ್ಲದೆ, ಆರಂಭಿಕ ಕೊಡುಗೆಯಾಗಿ ಐಸಿಐಸಿಐ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಗೆ ₹1,000 ಡಿಸ್ಕೌಂಟ್ ಕೂಡ ಇರಲಿದೆ. ಒನ್‌ಪ್ಲಸ್ E24 ಮಾನಿಟರ್ ಬೆಲೆ ಮತ್ತು ಲಭ್ಯತೆಯನ್ನು ಕಂಪನಿ ಬಹಿರಂಗಪಡಿಸಿಲ್ಲ. 10 + | 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ರಿಯಲ್‌ಮಿ ಬಳಕೆದಾರರ ವಿವಿಧ ಅವಶ್ಯಕತೆಗಳಿಗೆ ಅನುಗುಣವಾಗಿ ನೂತನ ಮಾನಿಟರ್ ಸಿದ್ಧಪಡಿಸಲಾಗಿದೆ ಎಂದು ಕಂಪನಿ ಹೇಳಿದೆ. S23: ಹೊಸ ಸ್ಮಾರ್ಟ್‌ಫೋನ್‌ ಸರಣಿ ಫೆಬ್ರುವರಿಯಲ್ಲಿ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.