ಪೋರ್ಶೆ 911 2.0 : ದೇಶದಲ್ಲಿ ₹10 ಲಕ್ಷ ದರ ಬೆಂಗಳೂರು: ಸೂಪರ್ ಕಾರ್ ತಯಾರಿಕ ಸಂಸ್ಥೆ ಪೋರ್ಶೆ, ಆಡಿಯೋ ಸರಣಿಯಲ್ಲಿ ಹೊಸ ಸೌಂಡ್‌ಬಾರ್ ಸ್ಪೀಕರ್ ಬಿಡುಗಡೆ ಮಾಡಿದೆ. 300 ವಾಟ್ ಸ್ಪೀಕರ್ ಇದಾಗಿದ್ದು, ದೇಶದಲ್ಲಿ ₹10 ಲಕ್ಷ ದರ ಇರಲಿದೆ. ಪೋರ್ಶೆ 911 ಸೌಂಡ್‌ಬಾರ್ 2.0 ಪ್ರೊ ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಹೊಸ ಸ್ಪೀಕರ್ 5.0 ಬ್ಲೂಟೂತ್, ಆ್ಯಪಲ್ ಏರ್‌ಪ್ಲೇ 2, ಗೂಗಲ್ ಕ್ರೋಮ್‌ಕಾಸ್ಟ್ ಮತ್ತು ಸ್ಪಾಟಿಫೈ ಕನೆಕ್ಟ್ ಆಯ್ಕೆಗಳನ್ನು ಹೊಂದಿದೆ. ಪೋರ್ಶೆ 992 ಜಿಟಿ3 ಕಾರಿನ ನೈಜ ಸೈಲೆನ್ಸರ್ ಬಳಸಿ ಹೊಸ ಸ್ಪೀಕರ್ ತಯಾರಿಸಲಿದೆ. ಹೊಸ ಪೋರ್ಶೆ ಸ್ಪೀಕರ್ ಅನ್ನು ಸೀಮಿತ (500) ಸಂಖ್ಯೆಯಲ್ಲಿ ತಯಾರಿಸಲಾಗುತ್ತದೆ. G11 | ದೇಶದ ಮಾರುಕಟ್ಟೆಗೆ ನೋಕಿಯಾ ಹೊಸ ಸ್ಮಾರ್ಟ್‌ಫೋನ್ ಈಗಾಗಲೇ ಪ್ರಿ ಆರ್ಡರ್ ಆರಂಭವಾಗಿದ್ದು, 2023ರ ಜನವರಿಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಮಿವಿ ಕಂಪನಿಯಿಂದ ಮೇಡ್ ಇನ್ ಇಂಡಿಯಾ ಸೌಂಡ್ ಬಾರ್ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.