T21 | ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ ಬೆಂಗಳೂರು: ಬೇಸಿಕ್ ಫೀಚರ್ ಮೊಬೈಲ್ ಮೂಲಕ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿರುವ ನೋಕಿಯಾ, ಟ್ಯಾಬ್ಲೆಟ್ ಲೋಕದಲ್ಲೂ ಹೆಸರು ಗಳಿಸಿದೆ. ನೋಕಿಯಾ, ಟಿ21 ಹೆಸರಿನ ಆಕರ್ಷಕ ಟ್ಯಾಬ್ ಒಂದನ್ನು ಬಿಡುಗಡೆ ಮಾಡಿದ್ದು, 10.36 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಫ್ಲ್ಯಾಶ್ ಇದ್ದು, ಮುಂಭಾಗದಲ್ಲೂ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದರ ವಿಶೇಷತೆಯಾಗಿದೆ ಎಂದು ನೋಕಿಯಾ ಹೇಳಿದೆ. ಹೊಸ ನೋಕಿಯಾ ಟಿ21 ಟ್ಯಾಬ್‌ನಲ್ಲಿ 8200 ಬ್ಯಾಟರಿ, 18W ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯಗಳು ದೊರೆಯಲಿವೆ. 4 ಮತ್ತು 64 ಸ್ಟೋರೇಜ್ ಇದ್ದು, ಮೈಕ್ರೋಎಸ್‌ಡಿ ಕಾರ್ಡ್ ಮೂಲಕ 512 ವರೆಗೆ ವಿಸ್ತರಿಸಬಹುದಾಗಿದೆ. T612 ಪ್ರೊಸೆಸರ್ ಬೆಂಬಲ ಇದ್ದು, ™ 12 ಓಎಸ್ ಮೂಲಕ ಕಾರ್ಯನಿರ್ವಹಿಸುತ್ತದೆ. S23 | ಹೊಸ ಸ್ಯಾಮ್‌ಸಂಗ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಪ್ರಿ–ಬುಕ್ ಮಾಡಿ.. ಬೆಲೆ ಮತ್ತು ಲಭ್ಯತೆ ಹೊಸ ನೋಕಿಯಾ ಟಿ21 ಟ್ಯಾಬ್‌ ದೇಶದಲ್ಲಿ ₹19,999 ದರ ಹೊಂದಿದೆ. ಆದರೆ, ₹2,000 ವಿಶೇಷ ಡಿಸ್ಕೌಂಟ್ ಹೊಂದಿದ್ದು, ಅದರ ಮೂಲಕ, ಗ್ರಾಹಕರಿಗೆ ₹17,999ಕ್ಕೆ ಲಭ್ಯವಾಗಲಿದೆ. ಉಳಿದಂತೆ, ಪ್ರಿ ಬುಕಿಂಗ್ ಮಾಡುವ ಗ್ರಾಹಕರಿಗೆ ₹1,000 ಡಿಸ್ಕೌಂಟ್ ಹಾಗೂ ₹1,999 ಮೌಲ್ಯದ ಫ್ಲಿಪ್ ಕವರ್ ಉಚಿತವಾಗಿ ದೊರೆಯುತ್ತದೆ, ಈ ಕೊಡುಗೆ ಸೀಮಿತ ಅವಧಿಗೆ ಇರಲಿದೆ ಎಂದು ನೋಕಿಯಾ ಹೇಳಿದೆ. 12 5G | ಶಓಮಿ ರೆಡ್ಮಿ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.