ಮೊದಲ ಸ್ಮಾರ್ಟ್ ವಾಚ್‌ ಹೇಗಿತ್ತು? ವಿಡಿಯೊ ಹಂಚಿಕೊಂಡ ಸಚಿವ ರಾಜೀವ್‌ ಚಂದ್ರಶೇಖರ್‌ ನವದೆಹಲಿ: ಮೊಟ್ಟ ಮೊದಲು ಮಾರುಕಟ್ಟೆಗೆ ಬಂದ ಸ್ಮಾರ್ಟ್‌ ವಾಚ್‌ ಕುರಿತಾದ ವಿಡಿಯೊವೊಂದನ್ನು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ 1982ರಲ್ಲಿ ಬಿಡುಗಡೆಯಾದ ಮೊದಲ ಸ್ಮಾರ್ಟ್‌ವಾಚ್‌ಬಗ್ಗೆ ವಿವರಿಸಲಾಗಿದೆ. ಇದು ಸೀಕೊ () ಕಂಪನಿಯದ್ದಾಗಿದೆ. ಟಿವಿ ಕಾರ್ಯಕ್ರಮವೊಂದರ ವಿಡಿಯೊವನ್ನು ಸಚಿವರು ಹಂಚಿಕೊಂಡಿದ್ದಾರೆ. ಇದರಲ್ಲಿ ಸ್ಮಾರ್ಟ್‌ವಾಚ್‌ ಕುರಿತು ಕುತೂಹಲದ ವಿಷಯವನ್ನು ನಿರೂಪಕರು ಹಂಚಿಕೊಳ್ಳುವ ದೃಶ್ಯವನ್ನು ಕಾಣಬಹುದು. ‘1982ರಲ್ಲಿ ಬಿಡುಗಡೆಯಾದ ಮೊದಲ ಸ್ಮಾರ್ಟ್‌ ವಾಚ್‌ನಿಂದ ಇಂದಿನ ತಂತ್ರಜ್ಞಾನದವರೆಗೆ...ಇದು ತಂತ್ರಜ್ಞಾನ ಅಭಿವೃದ್ಧಿಯ ಪಯಣ’ ಎಂದು ಬರೆದುಕೊಂಡಿದ್ದಾರೆ. ವಿಡಿಯೊ ನೋಡಿ ಹಲವು ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ತಂತ್ರಜ್ಞಾನದ ಬೆಳವಣಿಗೆ ಅಚ್ಚರಿ ಮೂಡಿಸುತ್ತಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಬದಲಾಗಲಿದೆ ಎಂದು ಕಾಮೆಂಟ್‌ ಮಾಡಿದ್ದಾರೆ. “ ” # 1982 ' , ' .# ../3ScizEGemp ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.