ಆಂಡ್ರಾಯ್ಡ್ 14ನೊಂದಿಗೆ ಟೆಕ್‌ನೊ ಕ್ಯಾಮನ್ 20 ಪ್ರೀಮಿಯರ್ 5ಜಿ ಸ್ಮಾರ್ಟ್‌ಫೋನ್ ನವದೆಹಲಿ: ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಟೆಕ್‌ನೊ, ಬಹುನಿರೀಕ್ಷಿತ ಕ್ಯಾಮನ್ 20 ಪ್ರೀಮಿಯಂ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಸಂಸ್ಥೆಯ 13.6 ಆಪರೇಟಿಂಗ್ ಸಿಸ್ಟಂ ಸಹ ಒಳಗೊಂಡಿರಲಿದೆ. ಈ ಮೂಲಕ ಟೆಕ್‌ನೊ, ಆಂಡ್ರಾಯ್ಡ್ 14 ಪರಿಚಯಿಸುತ್ತಿರುವ ಮುಂಚೂಣಿಯ ಬ್ರ್ಯಾಂಡ್‌ಗಳಲ್ಲಿ ಒಂದೆನಿಸಿದೆ. ಗೇಮ್ ಅಸಿಸ್ಟ್ ಪ್ಯಾನೆಲ್, ವಿಷ್ಯುವಲ್ ಕ್ಲಾಕ್, ವೆಥರ್ ವಿಜೆಟ್, ಮಲ್ಟಿ-ಟಾಸ್ಕಿಂಗ್ ಮೋಡ್, ಎಐ ಗ್ಯಾಲರಿ ಪ್ರಮುಖ ಆಕರ್ಷಣೆಯಾಗಿರಲಿವೆ. ಕ್ಯಾಮನ್ 20 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್ 14 ಅಪ್‌ಡೇಟ್ ಅನ್ನು ಟೆಕ್‌ನೊ ಹಂತ ಹಂತವಾಗಿ ಪರಿಚಯಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.