: ಥಾಮ್ಸನ್ ಎಐ ಸಾಮರ್ಥ್ಯದ ಟಿವಿ ಬಿಡುಗಡೆ, ವಿವರ ಇಲ್ಲಿದೆ ನವದೆಹಲಿ: ಎಲೆಕ್ಟ್ರಾನಿಕ್‌ ಉಪಕರಣಗಳ ತಯಾರಿಕಾ ಕಂಪನಿ ಥಾಮ್ಸನ್‌, ದೇಶದ ಗ್ರಾಹಕರಿಗಾಗಿ ಎಐ ಸಾಮರ್ಥ್ಯದ ಟಿವಿ ಸಿರೀಸ್ ಬಿಡುಗಡೆಗೊಳಿಸಿದೆ. ಇದೇ ವೇಳೆ ಸೆಮಿ ಆಟೋಮ್ಯಾಟಿಕ್ ಅಕ್ವಾ ಮ್ಯಾಜಿಕ್ ಗ್ರ್ಯಾಂಡ್ ಸಿರೀಸ್ ವಾಷಿಂಗ್ ಮೆಷಿನ್ ಸಹ ಪರಿಚಯಿಸಿದೆ. ವಾಯ್ಸ್ ರೆಕಾಗ್ನಿಷನ್, ವೈಯಕ್ತಿಕಗೊಳಿಸಿದ ಸಲಹೆಗಳು, ಎಐ ಅಪ್‌ಸ್ಕೇಲಿಂಗ್, ಎಐ ಚಾಲಿತ ಆಡಿಯೊ ಪ್ರೊಸೆಸಿಂಗ್ ಮುಂತಾದ ಎಐ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ. ಬೆಲೆ ಮಾಹಿತಿ: ಎಐ ಸಾಮರ್ಥ್ಯದ 75 ಇಂಚುಗಳ ಟಿವಿ: ₹79,999 ಎಐ ಸಾಮರ್ಥ್ಯದ 32 ಇಂಚುಗಳ ಟಿವಿ: ₹11,499 ಸೆಮಿ ಆಟೋಮ್ಯಾಟಿಕ್ ಅಕ್ವಾ ಮ್ಯಾಜಿಕ್ ಗ್ರ್ಯಾಂಡ್ ಸಿರೀಸ್ ವಾಷಿಂಗ್ ಮೆಷಿನ್: ₹8,999 ಖರೀದಿಗೆ ಯಾವಾಗ ಲಭ್ಯ? ಫ್ಲಿಫ್‌ಕಾರ್ಟ್‌ನ 'ಗ್ರೇಟೆಸ್ಟ್ ಆಪ್ ಆಲ್ ಟೈಮ್ ಸೇಲ್ಸ್' () ವೇಳೆಯಲ್ಲಿ ಥಾಮ್ಸನ್ ಎಐ ಸಾಮರ್ಥ್ಯದ ಟಿವಿ ಹಾಗೂ ವಾಷಿಂಗ್ ಮೆಷಿನ್ ಖರೀದಿಗೆ ಲಭ್ಯವಾಗಲಿದೆ. ಫ್ಲಿಫ್‌ಕಾರ್ಟ್‌ನ 'ಗ್ರೇಟೆಸ್ಟ್ ಆಪ್ ಆಲ್ ಟೈಮ್ ಸೇಲ್ಸ್' ಜುಲೈ 19ರಿಂದ 25ರವರೆಗೆ ನಡೆಯಲಿದೆ. ಆಫರ್: ಫ್ಲಿಫ್‌ಕಾರ್ಟ್‌ನ 'ಗ್ರೇಟೆಸ್ಟ್ ಆಪ್ ಆಲ್ ಟೈಮ್ ಸೇಲ್ಸ್' ಸಂದರ್ಭದಲ್ಲಿ ಆಕ್ಸಿಸ್, ಎಚ್‌ಡಿಎಫ್‌ಸಿ ಮತ್ತು ಐಡಿಎಫ್‌ಸಿ ಬ್ಯಾಂಕ್ ಕಾರ್ಡ್ ಹೊಂದಿರುವವರು ಶೆ 10ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಹಾಗೆಯೇ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಶೇ 5 ಅನ್‌ಲಿಮಿಟೆಡ್ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಥಾಮ್ಸನ್ ಎಐ ಸಾಮರ್ಥ್ಯದ ಟಿವಿ ಎಐ ಸಾಮರ್ಥ್ಯದ 75 ಇಂಚುಗಳ ಟಿವಿ: ವೈಶಿಷ್ಟ್ಯಗಳು 4ಕೆ ಡಿಸ್‌ಪ್ಲೇ, ಬಿಜೆಲ್‌ಲೆಸ್ ಡಿಸ್‌ಪ್ಲೇ, ಡಾಲ್ಬಿ ವಿಷನ್ 10+, ಡಾಲ್ಬಿ ಅಟ್ಮೋಸ್‌, ಡಾಲ್ಬಿ ಡಿಜಿಟಲ್ ಪ್ಲಸ್, ಡಿಟಿಎಸ್ ಟ್ರುಸೌರಂಡ್, 40W ಡಾಲ್ಬಿ ಆಡಿಯೊ ಸ್ಟೀರಿಯೊ ಬಾಕ್ಸ್ ಸ್ಪೀಕರ್, 2GB , 16GB , ಡ್ಯುಯಲ್ ಬ್ಯಾಂಡ್ (2.4 + 5 ), ವೈಫೈ, ಗೂಗಲ್ ಟಿವಿ, 10,000ಕ್ಕೂ ಅಧಿಕ ಆ್ಯಪ್, 500,000ಕ್ಕೂ ಅಧಿಕ ಟಿ.ವಿ ಶೋ (ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೊ, ಹಾಟ್ ಸ್ಟಾರ್, ಝೀ5, ಆ್ಯಪಲ್ ಟಿವಿ, ವೂಟ್, ಸೋನಿ ಲೈವ್, ಗೂಗಲ್ ಪ್ಲೇ ಸ್ಟೋರ್) ಗೇಮ್ಸ್. ಥಾಮ್ಸನ್ ಎಐ ಸಾಮರ್ಥ್ಯದ ಟಿವಿ ಎಐ ಸಾಮರ್ಥ್ಯದ 32 ಇಂಚುಗಳ ಟಿವಿ: ವೈಶಿಷ್ಟ್ಯಗಳು 1366 768 ಪಿಕ್ಸೆಲ್ ರೆಸೊಲ್ಯೂಷನ್, 550 ನಿಟ್ಸ್ ಬ್ರೈಟ್‌ನೆಸ್, ಗೂಗಲ್ ಆಂಡ್ರಾಯ್ಡ್ ಟಿವಿ, ನೆಟ್‌ಫ್ಲಿಕ್ಸ್, ಯೂಟ್ಯೂಬ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಪ್ರೈಮ್ ವಿಡಿಯೊ, ಮೂರು ಪೊರ್ಟ್, ಎರಡು ಪೋರ್ಟ್, ವೈಫೈ, ಡಾಲ್ಬಿ ಡಿಜಿಟಲ್ ಪ್ಲಸ್ ಸೌಂಡ್ ಟೆಕ್ನಾಲಜಿ, 48W , -T2 ಟಿಜಿಟಲ್ ಟಿವಿ, ಸೆಮಿ ಆಟೋಮ್ಯಾಟಿಕ್ ಅಕ್ವಾ ಮ್ಯಾಜಿಕ್ ಗ್ರ್ಯಾಂಡ್ ಸಿರೀಸ್ ವಾಷಿಂಗ್ ಮೆಷಿನ್ 7 ಕೆ.ಜಿ, 8 ಕೆ.ಜಿ, 8.5 ಕೆ.ಜಿ, 10 ಕೆ.ಜಿ ಮತ್ತು 12 ಕೆ.ಜಿ ಸಿರೀಸ್‌ಗಳಲ್ಲಿ ಲಭ್ಯವಿರಲಿದೆ. ಫ್ಲಿಫ್‌ಕಾರ್ಟ್‌ನ 'ಗ್ರೇಟೆಸ್ಟ್ ಆಪ್ ಆಲ್ ಟೈಮ್ ಸೇಲ್ಸ್' ವೇಳೆ ಥಾಮ್ಸನ್ ಟಿವಿಗಳ ದರ ಪಟ್ಟಿ ಥಾಮ್ಸನ್ ವಾಷಿಂಗ್ ಮೆಷಿನ್: ಸಂಪೂರ್ಣ ದರ ಪಟ್ಟಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.