ರೈನರ್‌ ವೈಸ್‌ ಜನನ: 29 ಸೆಪ್ಟೆಂಬರ್‌ 1932 ಸ್ಥಳ: ಬರ್ಲಿನ್‌, ಜರ್ಮನಿ ಪ್ರಶಸ್ತಿ ಸಂದ ವರ್ಷ: 2017 (ಈ ಪ್ರಶಸ್ತಿಯನ್ನು ಮೂವರಿಗೆ ಹಂಚಲಾಗಿದೆ) ಸಾಧನೆ: ಖ್ಯಾತ ವಿಜ್ಞಾನಿ, ಸಂಶೋಧಕ ಆಲ್ಬರ್ಟ್ ಐನ್‌ಸ್ಟೀನ್ ಅವರ ಸಾಪೇಕ್ಷಾ ಸಿದ್ಧಾಂತವು, ಗುರುತ್ವಾಕರ್ಷಣೆ ಅಲೆಗಳ ಅಸ್ತಿತ್ವದ ಬಗ್ಗೆ ತಿಳಿಸುತ್ತದೆ. ಈ ಅಲೆಗಳು, ವಸ್ತುವೊಂದರ ದ್ರವ್ಯರಾಶಿಯ ರಚನೆ ವೇಗ ಹೆಚ್ಚಿದಾಗ ತರಂಗಗಳಾಗಿ ನಾಲ್ಕು ಆಯಾಮಗಳಲ್ಲಿ ಗೋಚರಿಸುತ್ತವೆ. 1970ರಲ್ಲಿ ಲಿಗೊ ಡಿಟೆಕ್ಟರ್ ಪತ್ತೆ ಮಾಡಲಾಯಿತು. ಈ ಸಾಧನದ ಮೂಲಕ ಗುರುತ್ವಾಕರ್ಷಣೆ ಅಲೆಗಳಲ್ಲಿ ಆಗುವ ಪುಟ್ಟ ಬದಲಾವಣೆಗಳನ್ನು ಪತ್ತೆ ಮಾಡಲು, ಲೇಸರ್ ತಂತ್ರಜ್ಞಾನ ಬಳಸಲಾಯಿತು. ಈ ಸಾಧನ ತಯಾರಿಗೆ ರೈನರ್ ವೈಸ್‌ ಅವರ ಶ್ರಮ ಅಪಾರವಿದೆ. ಈ ಸಾಧನದ ಮೂಲಕವೇ 2015ರಲ್ಲಿ ಮೊದಲ ಬಾರಿಗೆ ಗುರುತ್ವಾಕರ್ಷಣೆ ಅಲೆಗಳನ್ನು ಪತ್ತೆ ಮಾಡಲಾಯಿತು. ಇವರ ಈ ಸಾಧನೆ ಪರಿಗಣಿಸಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.