: ಹೊಸ ಐಪ್ಯಾಡ್, ಐಪ್ಯಾಡ್ ಪ್ರೊ ಮತ್ತು ಮ್ಯಾಕ್ ಶೀಘ್ರದಲ್ಲಿ ಬಿಡುಗಡೆ ಬೆಂಗಳೂರು: ಕಳೆದ ತಿಂಗಳು ವಿಶೇಷ ಈವೆಂಟ್ ಆಯೋಜಿಸಿದ್ದ ಆ್ಯಪಲ್, ಐಫೋನ್ 14 ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಬಾರಿ ಮತ್ತೊಂದು ಈವೆಂಟ್ ನಡೆಸಿ, ಹೊಸ ಸರಣಿಯ ಐಪ್ಯಾಡ್ ಮತ್ತು ಮ್ಯಾಕ್‌ಬುಕ್ ಬಿಡುಗಡೆ ಮಾಡಲು ಆ್ಯಪಲ್ ಸಜ್ಜಾಗಿದೆ. ಅಕ್ಟೋಬರ್ ತಿಂಗಳ ಕೊನೆಯಲ್ಲಿ ಈವೆಂಟ್ ಒಂದನ್ನು ಆಯೋಜಿಸಿ, ನೂತನ ಐಪ್ಯಾಡ್ ಮತ್ತು ಮ್ಯಾಕ್ ಬಿಡುಗಡೆಯನ್ನು ಆ್ಯಪಲ್ ಮಾಡಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಭಾರತದಲ್ಲೇ ತಯಾರಾಗಲಿದೆ ಆ್ಯಪಲ್ ಏರ್‌ಪಾಡ್ಸ್: ಕೇಂದ್ರ ಸರ್ಕಾರ ಮಾಹಿತಿ 10th ಐಪ್ಯಾಡ್ ಮತ್ತು 5th ಐಪ್ಯಾಡ್ ಪ್ರೊ ಅನ್ನು ಆ್ಯಪಲ್ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಜತೆಗೆ M2 ಸಿಲಿಕಾನ್ ಪ್ರೊಸೆಸರ್ ಸಹಿತ ಹೊಸ ಮ್ಯಾಕ್‌ ಸರಣಿಯನ್ನು ಆ್ಯಪಲ್ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಯಿದೆ ಎಂದು ಗ್ಯಾಜೆಟ್ ಮಾರುಕಟ್ಟೆ ಪರಿಣತ ಮಾರ್ಕ್ ಗುರ್ಮನ್ ತಿಳಿಸಿದ್ದಾರೆ. ದೀಪಾವಳಿಗೆ ವಿಶೇಷ ಕೊಡುಗೆ ಘೋಷಿಸಿದ ಆ್ಯಪಲ್: ಐಫೋನ್, ಮ್ಯಾಕ್ ಖರೀದಿಗೆ ಡಿಸ್ಕೌಂಟ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.