ಸಿಟಿ ಸ್ಕ್ಯಾನ್ ಮೂಲಕ ಈಜಿಪ್ಟ್ ಮಮ್ಮಿಯ ಸಂಶೋಧನೆ ನಡೆಸಿದ ಇಟಲಿ ಆಸ್ಪತ್ರೆ ಬರ್ಗಾಮೊ: ಪ್ರಾಚೀನ ಕಾಲದ ಈಜಿಪ್ಟ್ ಮಮ್ಮಿ ಒಂದನ್ನು ಸಂಶೋಧನೆಯ ಸಲುವಾಗಿ ಇಟಲಿಯ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಪರೀಕ್ಷೆಗೆ ಒಳಪಡಿಸಲಾಗಿದೆ. ಈಜಿಪ್ಟ್‌ನ ಧರ್ಮಗುರುವಾಗಿದ್ದ ಆಂಖೋಂನ್ಸು ಅವರ ಮಮ್ಮಿಯನ್ನು ಬರ್ಗಾಮೊದ ಸಿವಿಕ್ ಆರ್ಕಿಯಾಲಜಿ ಮ್ಯೂಸಿಯಂನಿಂದ ಮಿಲಾನ್‌ನ ಪೋಲಿಸಿನಿಕೊ ಆಸ್ಪತ್ರೆಗೆ ತಂದು, ಅಧ್ಯಯನ ನಡೆಸುತ್ತಿದ್ದಾರೆ. 3,000 ವರ್ಷಗಳ ಹಳೆಯ ಮಮ್ಮಿ ಇದಾಗಿದ್ದು, ಅಂದಿನ ಜನರ ಜೀವನಶೈಲಿ ಸಹಿತ ವಿವಿಧ ಅಂಶಗಳನ್ನು ಕಂಡುಕೊಳ್ಳಲು ಇದು ನೆರವಾಗಲಿದೆ. ಮಮ್ಮಿಗಳೆಂದರೆ ಅವುಗಳು ಜೈವಿಕ ಮ್ಯೂಸಿಯಂ ಇದ್ದಂತೆ, ಅವುಗಳ ಮೂಲಕ ವಿವಿಧ ಸಂಗತಿಗಳನ್ನು ನಾವು ತಿಳಿದುಕೊಳ್ಳಬಹುದು ಎಂದು ಮಮ್ಮಿ ಪ್ರಾಜೆಕ್ಟ್ ರಿಸರ್ಚ್‌ನ ನಿರ್ದೇಶಕರಾದ ಸಬೀನಾ ಮಲ್ಗೊರಾ ತಿಳಿಸಿದ್ದಾರೆ. ಈಜಿಪ್ಟ್ ಧರ್ಮಗುರುವಿನ ಮರಣದ ಬಳಿಕ ದೇಹವನ್ನು ಸಂರಕ್ಷಿಸಲು ಯಾವ ವಿಧಾನ ಅನುಸರಿಸಿದರು ಮತ್ತು ಯಾವ ವಸ್ತು ಬಳಸಲಾಯಿತು ಎನ್ನುವುದನ್ನು ಸಂಶೋಧನೆಯಿಂದ ಕಂಡುಕೊಳ್ಳಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಆಯುರ್ವೇದದಲ್ಲಿ ಬಳಸುವ ಗಿಡಮೂಲಿಕೆಯಲ್ಲಿ ಕೋವಿಡ್‌ಗೆ ಔಷಧ: ಸಂಶೋಧನೆ ಅಲ್ಲದೆ, ಪ್ರಾಚೀನ ಕಾಲದಲ್ಲಿದ್ದ ಕಾಯಿಲೆಗಳು ಮತ್ತು ಗಾಯಗಳ ಬಗ್ಗೆಯೂ ತಿಳಿಯಲು ಯತ್ನಿಸಲಾಗುತ್ತಿದೆ. ಇದರಿಂದ ಆಧುನಿಕ ವೈದ್ಯ ವಿಜ್ಞಾನ ಮತ್ತು ಸಂಶೋಧನೆಗೆ ಅನುಕೂಲವಾಗಲಿದೆ ಎಂದು ಸಬೀನಾ ತಿಳಿಸಿದ್ದಾರೆ. ಕೊರೊನಾ ವೈರಸ್‌ಗೆ ಔಷಧ ಸಂಶೋದನೆ: ಇಲಿಗಳ ಮೇಲಿನ ಪ್ರಯೋಗ ಆಶಾದಾಯಕ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.