3T: ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದ ರಿಯಲ್‌ಮಿ ಬೆಂಗಳೂರು: ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ರಿಯಲ್‌ಮಿ, ಜಿಟಿ ಸರಣಿಯಲ್ಲಿ ಆಕರ್ಷಕ ಮಾದರಿಯನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ರಿಯಲ್‌ಮಿ ಜಿಟಿ 3T ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, 6.62 ಇಂಚಿನ ಫುಲ್‌ ಎಚ್‌ಡಿ+ ಅಮೊಲೆಡ್ ಡಿಸ್‌ಪ್ಲೇ, ಇನ್–ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸರ್ ಇದರ ವಿಶೇಷತೆಯಾಗಿದೆ. ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 870 ಪ್ರೊಸೆಸರ್ ಜತೆಗೆ ಹೊಸ ರಿಯಲ್‌ಮಿ ಸ್ಮಾರ್ಟ್‌ಪೋನ್‌ನಲ್ಲಿ 650 ಗ್ರಾಫಿಕ್ಸ್, 6 /8 LPDDR4x ಮತ್ತು 128 / 256 ಎಂಬ ಎರಡು ಸ್ಟೋರೇಜ್ ಆಯ್ಕೆ ಇದರಲ್ಲಿ ದೊರೆಯಲಿದೆ. ಜತೆಗೆ, 5,000mAh ಬ್ಯಾಟರಿ ಮತ್ತು 80W ಚಾರ್ಜರ್ ಇದರಲ್ಲಿದೆ ಎಂದು ರಿಯಲ್‌ಮಿ ಹೇಳಿದೆ. ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 8 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ. ಬೆಲೆ ಮತ್ತು ಲಭ್ಯತೆ ರಿಯಲ್‌ಮಿ ಜಿಟಿ 3T ಸ್ಮಾರ್ಟ್‌ಫೋನ್ ಹಳದಿ, ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ದೊರೆಯಲಿದೆ. ಟೆಕ್‌ನೊ ಕ್ಯಾಮನ್ 19 ಪ್ರೊ | ಬಿಸಿಲಿಗೆ ಬಣ್ಣ ಬದಲಿಸುವ ಫೋನ್ 6 + 128 ಮಾದರಿಗೆ ₹29,999 ಹಾಗೂ 8 + 128 ಆವೃತ್ತಿಗೆ ₹31,999 ಹಾಗೂ 8 + 256 ಮಾದರಿ ₹33,999 ದರಕ್ಕೆ ಲಭ್ಯವಿದೆ. 2022: ಈ ತಿಂಗಳಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.