ಕೊರೊನಾ ವೈರಸ್‌ಗೆ ಔಷಧ ಸಂಶೋದನೆ: ಇಲಿಗಳ ಮೇಲಿನ ಪ್ರಯೋಗ ಆಶಾದಾಯಕ ನವದೆಹಲಿ: ಕೋವಿಡ್‌ ಇರುವ ಇಲಿಗಳಲ್ಲಿ 'ಸಾರ್ಸ್‌ ಕೋವ್‌-2' ಮಾದರಿಯ ವೈರಸ್‌ ಅನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಲ್ಲ ಔಷಧವೊಂದನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಅಲ್ಲದೆ, ಉಸಿರಾಟ ವ್ಯವಸ್ಥೆ ಮೇಲೆ ದಾಳಿ ಮಾಡುವ ಇತರ ಕೊರೊನಾ ವೈರಸ್‌ಗಳ ಮೇಲೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ 'ಪೆರೆಲ್ಮನ್ ಸ್ಕೂಲ್ ಆಫ್ ಮೆಡಿಸಿನ್' ವಿಜ್ಞಾನಿಗಳ ಸಂಶೋಧನೆ 'ಸೈನ್ಸ್‌ ಇಮ್ಯುನೊಲಜಿ' ಜರ್ನಲ್‌ನಲ್ಲಿ ಪ್ರಕಟವಾಗಿದೆ. 'ಸದ್ಯ ಪತ್ತೆಯಾಗಿರುವ ಔಷಧ- ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಪ್ರಚೋಧಿಸುತ್ತದೆ. ವೈರಸ್‌ ವಿರುದ್ಧದ ಮುಂಚೂಣಿ ಶಕ್ತಿಯನ್ನು ಉದ್ದೀಪಿಸುತ್ತದೆ,' ಎಂದು ಬರೆಯಲಾಗಿದೆ. 'ಒಂದೇ ಡೋಸ್‌ ಔಷಧಿಯು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿರುವುದು ಅಧ್ಯಯನಗಳಿಂದ ಗೊತ್ತಾಗಿದೆ. ದಕ್ಷಿಣ ಅಫ್ರಿಕಾ ಮಾದರಿಯ ಕೊರೊನಾ ವೈರಸ್‌ ತಳಿಯನ್ನೂ ಈ ಔಷಧ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಸಾರಾ ಚೆರ್ರಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.