: ಹೊಸ ಸರಣಿಯ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದ ಒನ್‌ಪ್ಲಸ್ ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಒನ್‌ಪ್ಲಸ್, ಸ್ಮಾರ್ಟ್ ಟಿವಿ ಸರಣಿಯಲ್ಲಿ ಹೊಸ ಮಾದರಿಯನ್ನು ಪರಿಚಯಿಸಿದೆ. ನೂತನ ಒನ್‌ಪ್ಲಸ್ ಟಿವಿ Y1S 55 ಬಿಡುಗಡೆಯಾಗಿದ್ದು, 4K ರೆಸೊಲ್ಯೂಷನ್ ಹೊಂದಿದೆ. ಗರಿಷ್ಠ ಪರದೆ ಮತ್ತು ಕನಿಷ್ಠ ಫ್ರೇಮ್ ವಿನ್ಯಾಸದ ಟಿವಿ, ಗಾಮಾ ಎಂಜಿನ್ ಮೂಲಕ ಹೆಚ್ಚು ಸ್ಪಷ್ಟ ಚಿತ್ರಗಳನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಹೊಸ ಒನ್‌ಪ್ಲಸ್ ಟಿವಿಯಲ್ಲಿ 64- ಮೀಡಿಯಾಟೆಕ್ MT9216 ಪ್ರೊಸೆಸರ್, 2GB ಮತ್ತು 8 ಸ್ಟೋರೇಜ್ ಹೊಂದಿದೆ. ಜತೆಗೆ 24W ಸ್ಪೀಕರ್ ಮತ್ತು ಆಡಿಯೊ ಬೆಂಬಲ ಇದ್ದು, ಗುಣಮಟ್ಟದ ಶಬ್ಧ ಹೊರಹೊಮ್ಮುತ್ತದೆ ಎಂದು ಒನ್‌ಪ್ಲಸ್ ಹೇಳಿದೆ. ಆ್ಯಂಡ್ರಾಯ್ಡ್ ಟಿವಿ 10 ಮತ್ತು ಆಕ್ಸಿಜನ್‌ಪ್ಲೇ 2.0 ಮೂಲಕ ಹೊಸ ಒನ್‌ಪ್ಲಸ್ ಟಿವಿ ಕಾರ್ಯನಿರ್ವಹಿಸುತ್ತದೆ. ಜತೆಗೆ ಎಲ್ಲ ಪ್ರಮುಖ ಅಪ್ಲಿಕೇಶನ್‌ಗಳು, ಒಟಿಟಿ ವೇದಿಕೆಗಳು ಲಭ್ಯವಾಗುತ್ತವೆ. ಚೀನಾದಿಂದ ಉತ್ಪಾದನಾ ಘಟಕ ಸ್ಥಳಾಂತರ: ಭಾರತ, ವಿಯೆಟ್ನಾಂನತ್ತ ಮುಖ ಮಾಡಿದ ಆ್ಯಪಲ್ ಬೆಲೆ ಮತ್ತು ಲಭ್ಯತೆ ಒನ್‌ಪ್ಲಸ್ ಟಿವಿ Y1S ಅಮೆಜಾನ್, ಒನ್‌ಪ್ಲಸ್ ಸ್ಟೋರ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ದೊರೆಯಲಿದ್ದು, ₹39,999 ದರ ಹೊಂದಿದೆ. 6: ಸ್ನ್ಯಾಪ್‌ಡ್ರ್ಯಾಗನ್ 8+ ಜನರೇಶನ್ 1 ಸ್ಮಾರ್ಟ್‌ಫೋನ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.