ಬಾಹ್ಯಾಕಾಶ ನಿಲ್ದಾಣ: ಗಗನಯಾನಿಗಳ ಕೈಯಲ್ಲಿ ಪಿಜ್ಜಾಗಳು ತೇಲುವ ಪರಿ ನೋಡಿ... ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ದಲ್ಲಿ ಗಗನಯಾನಿಗಳ ಕೈಯಲ್ಲಿಪಿಜ್ಜಾಗಳುಮ್ಯಾಜಿಕ್ ಮಾದರಿಯಲ್ಲಿ ತೇಲುವ ಪರಿಯನು ನೋಡುವುದೇ ಚೆಂದ ಎನ್ನುತ್ತಾರೆ ನೆಟ್ಟಿಗರು. ಹೌದು, ಫ್ರಾನ್ಸ್‌ ದೇಶದ ಗಗನಯಾನಿಗಳ ತಂಡ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಒಟ್ಟಿಗೆ ಪಿಜ್ಜಾ ಪಾರ್ಟಿ ಮಾಡುವಾಗ ’ಪಿಜ್ಜಾಗಳು’ ತೇಲಾಡಿವೆ. ಗುರುತ್ವ ಬಲ ಹಾಗೂ ಗಾಳಿ ಇಲ್ಲದಿರುವುದೇ ಪಿಜ್ಜಾಗಳು ತೇಲಾಡಲು ಕಾರಣ. ಫ್ರೆಂಚ್ ಗಗನಯಾತ್ರಿ ಥಾಮಸ್ ಪೆಸ್ಕ್ಯೂಟ್ ಎಂಬುವರ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಪಿಜ್ಜಾ ಪಾರ್ಟಿಯ ವಿಡಿಯೊಗೆ ನೆಟಿಜನ್‌ಗಳು ಫಿದಾ ಆಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಲಕ್ಷಾಂತರ ಜನರು ಶೇರ್ ಮಾಡುತ್ತಿದ್ದಾರೆ. ವಿಡಿಯೊ ನೋಡಿ: (@thom_astro) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.