19ರಂದು 580 ವರ್ಷಗಳಲ್ಲೇ ಸುದೀರ್ಘವಾದ ಪಾರ್ಶ್ವ ಚಂದ್ರಗ್ರಹಣ ಗೋಚರ ಕೋಲ್ಕತ್ತ: ಇದೇ 19ರಂದು ಈಶಾನ್ಯ ಭಾರತದಲ್ಲಿ 580 ವರ್ಷಗಳಲ್ಲೇ ಸುದೀರ್ಘವಾದ ಪಾರ್ಶ್ವ ಚಂದ್ರಗ್ರಹಣವು ಗೋಚರಿಸಲಿದೆ ಎಂದು ಖಗೋಳಶಾಸ್ತ್ರಜ್ಞರು ಶನಿವಾರ ತಿಳಿಸಿದ್ದಾರೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಕೆಲವು ಪ್ರದೇಶಗಳಲ್ಲಿ ಈ ಅಪರೂಪದ ವಿದ್ಯಮಾನವು ಗೋಚರಿಸಲಿದೆ ಎಂದು ಎಂಪಿ ಬಿರ್ಲಾತಾರಾಲಯದ ಸಂಶೋಧನಾ ಮತ್ತು ಶೈಕ್ಷಣಿಕ ನಿರ್ದೇಶಕ ಡೆಬಿಪ್ರೋಸಾದ್ ದುವಾರಿ ತಿಳಿಸಿದ್ದಾರೆ. ಭಾಗಶಃ ಗ್ರಹಣ ಮಧ್ಯಾಹ್ನ 12.48ಕ್ಕೆ ಆರಂಭವಾಗಿ ಸಂಜೆ 4.17ಕ್ಕೆ ಅಂತ್ಯವಾಗಲಿದೆ.ಗ್ರಹಣದ ಅವಧಿ 3 ಗಂಟೆ 28 ನಿಮಿಷ 24 ಸೆಕೆಂಡ್‌ಗಳಾಗಿದ್ದು, ಇದು 580 ವರ್ಷಗಳಲ್ಲೇ ಸುದೀರ್ಘವಾದುದು ಎಂದು ದುವಾರಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.