4: ಬಜೆಟ್ ದರದ ಆಕರ್ಷಕ ಸ್ಮಾರ್ಟ್‌ಫೋನ್ ಬಿಡುಗಡೆ ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿವಿಧ ಮಾದರಿಗಳನ್ನು ಪರಿಚಯಿಸಿರುವ ಟೆಕ್‌ನೊ ಬ್ರ್ಯಾಂಡ್, ಪೊವಾ ಸರಣಿಯಲ್ಲಿ ಹೊಸ ಪೊವಾ 4 ಪರಿಚಯಿಸಿದೆ. 13 ಮತ್ತು 128 ಸ್ಟೋರೇಜ್ ಹೊಸ ಟೆಕ್‌ನೊ ಪೊವಾ 4 ವಿಶೇಷತೆಯಾಗಿದೆ ಎಂದು ಕಂಪನಿ ಹೇಳಿದೆ. ನೂತನ ಟೆಕ್‌ನೊ ಪೊವಾ 4 ಸ್ಮಾರ್ಟ್‌ಫೋನ್‌ನಲ್ಲಿ 6.8 ಇಂಚಿನ ಡಿಸ್‌ಪ್ಲೇ, ಹಿಲಿಯೊ G99 ಪ್ರೊಸೆಸರ್, ಒಕ್ಟಾ ಕೋರ್ -A76 ಬೆಂಬಲ, 6000 ಬ್ಯಾಟರಿ ಮತ್ತು 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಟೆಕ್‌ನೊ ಪೊವಾ 4 ಸ್ಮಾರ್ಟ್‌ಫೋನ್ ಕ್ರಯೋಲೈಟ್ ಬ್ಲೂ, ಉರಾನೊಲಿತ್ ಗ್ರೇ ಮತ್ತು ಮ್ಯಾಗ್ಮಾ ಆರೆಂಜ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಾಗಲಿದೆ. ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ ನೂತನ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ. S23: ಹೊಸ ಸ್ಮಾರ್ಟ್‌ಫೋನ್‌ ಸರಣಿ ಫೆಬ್ರುವರಿಯಲ್ಲಿ ಬಿಡುಗಡೆ ಹೊಸ ಟೆಕ್‌ನೊ ಪೊವಾ 4, ಡಿಸೆಂಬರ್ 13ರಿಂದ ಅಮೆಜಾನ್ ಮತ್ತು ಜಿಯೊ ಮಾರ್ಟ್ ಮೂಲಕ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. 6: ಸ್ನ್ಯಾಪ್‌ಡ್ರ್ಯಾಗನ್ 8+ ಜನರೇಶನ್ 1 ಸ್ಮಾರ್ಟ್‌ಫೋನ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.