: ಇತಿಹಾಸದಲ್ಲೇ ಅತ್ಯಂತ ಬೃಹತ್ ರಾಕೆಟ್ ಉಡಾವಣೆಗೆ ಕ್ಷಣಗಣನೆ ಟೆಕ್ಸಾಸ್: ಬಾಹ್ಯಾಕಾಶ ಇತಿಹಾಸದಲ್ಲಿ ಅತ್ಯಂತ ಬೃಹತ್ ಆದ ಹಾಗೂ ಅತ್ಯಂತ ಶಕ್ತಿಶಾಲಿ ಆದ ರಾಕೆಟ್ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿಯಿಂದ ನಿರ್ಮಿಸಲ್ಪಟ್ಟಿರುವ ಸ್ಟಾರ್‌ಶಿಪ್ ಎಂಬ ಬೃಹತ್ ರಾಕೆಟ್ ಅನ್ನು (ಲಾಂಚ್ ವೆಹಿಕಲ್– ) ಪರೀಕ್ಷಾರ್ಥವಾಗಿ ಸೋಮವಾರ ಟೆಕ್ಸಾಸ್‌ನ ಗಲ್ಫ್ ಕೋಸ್ಟ್‌ನಿಂದ ಸೋಮವಾರ ಉಡಾವಣೆಯಾಗಲಿದೆ. ಇದು 390 ಮಿಟರ್ ಎತ್ತರವಿದ್ದು, 30 ಮೀಟರ್ ಸುತ್ತಳತೆ ಹೊಂದಿದೆ. ಇದು ಅಮೆರಿಕದ ಲಿಬರ್ಟಿ ಆಫ್ ಸ್ಟ್ಯಾಚುಗಿಂತ ಎತ್ತರವಾಗಿದೆ. ಈ ರಾಕೆಟ್‌ ವ್ಯವಸ್ಥೆಯು ಭೂಮಿಯಿಂದ ಸುಮಾರು 65 ಕಿ.ಮೀ. ಮೇಲೆ ಹೋಗಿ ಬಳಿಕ ಸ್ಟಾರ್‌ಶಿಪ್‌ನಿಂದ ಪ್ರತ್ಯೇಕಗೊಂಡು ಭೂಮಿಗೆ ಹಿಂತುರುಗಲಿದೆ. ಈ ಮೂಲಕ ಭವಿಷ್ಯದಲ್ಲಿ ಚಂದ್ರ ಹಾಗೂ ಮಂಗಳನಲ್ಲಿ ಮಾನವರನ್ನು ಕಳಿಸಲು ಈ ರಾಕೆಟ್ ಬಳಸಲು ಸ್ಪೇಸ್ ಎಕ್ಸ್‌ ಬೃಹತ್ ಯೋಜನೆ ಹಾಕಿಕೊಂಡಿದೆ. ಇದು ಸಿಬ್ಬಂದಿಯಿಲ್ಲದೇ ಹಾರಾಟ ನಡೆಸಲಿದ್ದು ಸಾಗರ ಪ್ರದೇಶದಲ್ಲಿ ಇದನ್ನು ಯಶಸ್ವಿಯಾಗಿ ಇಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಅಲ್ಲದೇ ಈ ರಾಕೆಟ್ ಅನ್ನು ಸಂಪೂರ್ಣವಾಗಿ ಮರುಬಳಕೆ ಮಾಡಲು ಉದ್ದೇಶಿಸಾಲಗಿದ್ದು ಬಾಹ್ಯಾಕಾಶ ವಿಜ್ಞಾನಿಗಳು ಈ ಪ್ರಕ್ರಿಯೆ ಮೇಲೆ ತೀವ್ರ ಕಣ್ಣಿಟ್ಟಿದ್ದಾರೆ. ಹಾಲಿವುಡ್‌ನ ಸಿನಿಮಾಗಳಲ್ಲಿ ನೋಡುತ್ತಿದ್ದ ರೋಮಾಂಚನಕಾರಿ ಸ್ಟಾರ್‌ಶಿಪ್‌ ಭವಿಷ್ಯದಲ್ಲಿ ನಿಜವಾಗಲಿವೆಯೇ ಎಂಬುದನ್ನು ಈ ಯೋಜನೆ ತಿಳಿಸಲಿದೆ. 🚀 🚀 -3:30 # 2023-04-17, ' # 24 (S24) , 7 (B7) .../XEa5QDdMt0 ನಂದಿನಿ ಕರ್ನಾಟಕದ ಹೆಮ್ಮೆ ಎಂದಿದ್ದಕ್ಕೆ ರಾಹುಲ್ ಗಾಂಧಿ ಕಾಲೆಳೆದ ಅಣ್ಣಾಮಲೈ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.