G60 5G: ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ನೋಕಿಯಾ ನವದೆಹಲಿ: ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾ, ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಜಿ ಸರಣಿಯಲ್ಲಿ ಹೊಸದಾಗಿ ನೋಕಿಯಾ G60 5G ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, 5G ತಂತ್ರಜ್ಞಾನವನ್ನು ಬೆಂಬಲಿಸಲಿದೆ. ಮೂರು ಪ್ರಮುಖ ಓಎಸ್ ಅಪ್‌ಗ್ರೇಡ್, ಮೂರು ವರ್ಷಗಳ ಕಾಲ ಸೆಕ್ಯುರಿಟಿ ಅಪ್‌ಡೇಟ್ ಹಾಗೂ ಎರಡು ವರ್ಷಗಳ ವಾರಂಟಿಯನ್ನು ನೋಕಿಯಾ, ನೂತನ G60 5G ಸ್ಮಾರ್ಟ್‌ಫೋನ್ ಗ್ರಾಹಕರಿಗೆ ನೀಡಲಿದೆ. ನೋಕಿಯಾ G60 5G 6.58 ಇಂಚಿನ ಫುಲ್‌ಎಚ್‌ಡಿ+ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಹೊಂದಿರುತ್ತದೆ. ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜೊತೆಗೆ 5+2 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಜತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ. 4500 ಬ್ಯಾಟರಿ, 20W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಸ್ನ್ಯಾಪ್‌ಡ್ರ್ಯಾಗನ್ 695 5G ಪ್ರೊಸೆಸರ್ ಸಹಿತ 6 ಮತ್ತು 128 ಸ್ಟೋರೇಜ್ ಆಯ್ಕೆಯಲ್ಲಿ ಹೊಸ ನೋಕಿಯಾ G60 5G ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯ ಎಂದು ಕಂಪನಿ ಹೇಳಿದೆ. : ಹೊಸ ವಿನ್ಯಾಸದ ಇಯರ್‌ಬಡ್ಸ್ ಪರಿಚಯಿಸಿದ ನಥಿಂಗ್ ಬೆಲೆ ಮತ್ತು ಲಭ್ಯತೆ ನವೆಂಬರ್ 8ರಿಂದ ಕಪ್ಪು ಮತ್ತು ಐಸ್ ಬಣ್ಣದಲ್ಲಿ ಹೊಸ ನೋಕಿಯಾ ಸ್ಮಾರ್ಟ್‌ಫೋನ್ ದೊರೆಯಲಿದ್ದು, ದೇಶದಲ್ಲಿ ₹29,999 ದರ ಹೊಂದಿದೆ. ಅಲ್ಲದೆ, ನೋಕಿಯಾ G60 5G ಖರೀದಿಸಿದಾಗ ₹3,599 ದರದ ನೋಕಿಯಾ ಪವರ್ ಇಯರ್‌ಬಡ್ಸ್ ಉಚಿತವಾಗಿ ದೊರೆಯಲಿದೆ ಎಂದು ನೋಕಿಯಾ ತಿಳಿಸಿದೆ. T10: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೋಕಿಯಾ ಹೊಸ ಟ್ಯಾಬ್ಲೆಟ್ ಎಂಟ್ರಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.