-3: ಯೋಜನೆ ಹಿಂದಿರುವ ‘ರಾಕೇಟ್ ಮಹಿಳೆ‘ ರಿತು ಶ್ರೀವಾಸ್ತವ ಶ್ರೀಹರಿಕೋಟಾ: ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಚಂದ್ರಯಾನ–3 ಯೋಜನೆಗೆ ಕ್ಷಣಗಣನೆ ಆರಂಭವಾಗಿದೆ. ಯೋಜನೆಯ ನಿರ್ದೇಶಕಿ ‘ರಾಕೇಟ್ ಮಹಿಳೆ‘ ರಿತು ಕುರಿತು ನಿರೀಕ್ಷೆಯ ನೋಟಗಳು ನೆಟ್ಟಿವೆ. ಎಲ್‌ವಿಎಂ 3 ಎಂ4 ಯೋಜನೆಯ ಮಾರ್ಕ್‌ 3 ರಾಕೇಟ್‌ ಆರು ಪೇಲೋಡ್‌ಗಳನ್ನು ಹೊತ್ತೊಯ್ಯಲಿದೆ. ಇದರಲ್ಲಿ ಲ್ಯಾಂಡರ್, ರೋವರ್ ಹಾಗೂ ಪ್ರೊಪ್ಶನ್ ಮಾಡ್ಯೂಲ್‌ ಇವೆ. ಭಾರತದೊಂದಿಗೆ ಇಡೀ ಜಗತ್ತಿನ ನಿರೀಕ್ಷೆ ನೆಟ್ಟಿರುವ ಈ ಇಡೀ ಯೋಜನೆಯ ಹಿಂದಿರುವ ವಿಜ್ಞಾನಿ ರಿತು ಕರಿಧಾಳ್ ಶ್ರೀವಾಸ್ತವ. ಇದನ್ನೂ ಓದಿ: -3: ಟಿಕ್‌.. ಟಿಕ್‌.. ಟಿಕ್‌.. ನಭಕ್ಕೆ ಚಿಮ್ಮಲು ಕ್ಷಣಗಣನೆ ಇಸ್ರೊ ವಿಜ್ಞಾನಿಯಾಗಿರುವ ರಿತು, ಚಂದ್ರಯಾನ–3 ಯೋಜನೆಯ ನಿರ್ದೇಶಕಿಯೂ ಹೌದು. ಉತ್ತರ ಪ್ರದೇಶದ ಲಖನೌ ಮೂಲದವರಾದ ಇವರು, ಮಂಗಳಯಾನ ಯೋಜನೆಯಲ್ಲೂ ಇದ್ದವರು. ಆಗ ಅವರು ಉಪನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಚಂದ್ರಯಾನ–3 ಯೋಜನೆಯ ಹೊಣೆಯನ್ನು ರಿತು ಅವರಿಗೆ ಇಸ್ರೊ ವಹಿಸಿದೆ. ರಿತು ಕರಿಧಾಳ್ ಅವರು ಲಖನೌ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹೆಚ್ಚಿನ ವ್ಯಾಸಂಗ ನಡೆಸಿದರು. ಏರೋಸ್ಪೇಸ್‌ ವಿಷಯದಲ್ಲಿ ವಿಶೇಷ ಪರಿಣತಿ ಪಡೆದಿರುವ ಇವರನ್ನೇ ಈ ಯೋಜನೆಗೆ ಇಸ್ರೊ ಆಯ್ಕೆ ಮಾಡಿದೆ. 1997ರಿಂದ ಇಸ್ರೊದಲ್ಲಿರುವ ರಿತು, ಭಾರತದ ರಾಕೇಟ್ ಮಹಿಳೆ ಎಂದೇ ಗುರುತಿಸಿಕೊಂಡಿದ್ದಾರೆ. ರಿತು ಅವರಿಗೆ ಯುವ ವಿಜ್ಞಾನಿ ಪ್ರಶಸ್ತಿ, ಇಸ್ರೊ ಟೀಂ ಪ್ರಶಸ್ತಿ, ಎಎಸ್‌ಐ ಟೀಂ ಪ್ರಶಸ್ತಿ, ಭಾರತೀಯ ವಾಯುನೆಲೆ ತಂತ್ರಜ್ಞಾನದ ಹಾಗೂ ಸಂಸ್ಥೆಯ ‘ಏರೋಸ್ಪೇಸ್ ವುಮೆನ್‘ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಇದನ್ನೂ ಓದಿ: ಆಳ–ಅಗಲ: ಚಂದ್ರನ ದಕ್ಷಿಣ ಧ್ರುವದತ್ತ ಇಸ್ರೊ.. ಈ ಸಾರಿ ಹೇಗಿರಲಿದೆ ಕಾರ್ಯಾಚರಣೆ? ಸುಮಾರು 42 ದಿನಗಳ ನಂತರ ಚಂದ್ರಯಾನ–3ರ ಲ್ಯಾಂಡರ್ ಮತ್ತು ರೋವರ್‌ ಚಂದಿರನ ದಕ್ಷಿಣ ಧ್ರುವದಲ್ಲಿ ಇಳಿಯಲಿವೆ. ಯೋಜನೆ ಯಶಸ್ವಿಯಾದಲ್ಲಿ ಚಂದ್ರನ ಅಂಗಳವನ್ನು ಯಶಸ್ವಿಯಾಗಿ ತಲುಪಿದ ರಾಷ್ಟ್ರಗಳ ಸಾಲಿಗೆ ಭಾರತ ಸೇರಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.