-3 | ಭೂಮಿ ಸುತ್ತಲಿನ ಮೂರನೇ ಕಕ್ಷೆಯನ್ನು ಯಶಸ್ವಿಯಾಗಿ ಏರಿದ ಗಗನನೌಕೆ ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ದ ಮಹತ್ವಾಕಾಂಕ್ಷೆಯ ಚಂದ್ರಯಾನ–3 ಯೋಜನೆಯಲ್ಲಿ ನೌಕೆಯನ್ನು ಭೂಮಿ ಸುತ್ತಲಿನ ಮೂರನೇ ಕಕ್ಷೆಗೆ ಸೇರಿಸುವಲ್ಲಿ ಇಸ್ರೊ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ನಭಕ್ಕೆ ಚಿಮ್ಮಿದ ಮಾರ್ಕ್ 3 ರಾಕೇಟ್‌, ಲ್ಯಾಂಡರ್ ಹಾಗೂ ರೋವರ್‌ ಹೊಂದಿದ ನೌಕೆ ಸರಿಯಾದ ಕಕ್ಷೆಗೆ ಸೇರಿಸಿತ್ತು. ಸೋಮವಾರ ಎರಡನೇ ಕಕ್ಷೆಗೆ ಯಶಸ್ವಿಯಾಗಿ ಏರಿತು. ಮಂಗಳವಾರ ಮಧ್ಯಾಹ್ನ ನೌಕೆಯನ್ನು ಮೂರನೇ ಕಕ್ಷೆಗೆ ಸೇರಿಸುವ ಕಾರ್ಯವನ್ನು ವಿಜ್ಞಾನಿಗಳು ಯಶಸ್ವಿಯಾಗಿ ನಡೆಸಿದ್ದಾರೆ. ಮುಂದಿನ ಕಕ್ಷೆಗೆ ಸೇರಿಸುವ ಕಾರ್ಯ ಜುಲೈ 20ರಂದು ಮಧ್ಯಾಹ್ನ 2 ರಿಂದ 3ರವರೆಗೆ ನಡೆಯಲಿದೆ ಎಂದು ಇಸ್ರೊ ಹೇಳಿದೆ. ಆಗಸ್ಟ್‌ 1ರಿಂದ ಚಂದ್ರನ ಕಕ್ಷೆಗೆ ಗಗನನೌಕೆಯನ್ನು ಸೇರಿಸುವ ಕಾರ್ಯ ಆರಂಭವಾಗಲಿದೆ. ಭೂಕಕ್ಷೆಯನ್ನು ದಾಟಿ ಚಂದಿರನಲ್ಲಿ ಇಳಿಯಲು ಪ್ಯೊಪಲ್ಷನ್‌ ಮಾಡ್ಯೂಲ್‌ಗೆ ಅಗತ್ಯ ನೂಕುಬಲ ಬೇಕಿದೆ. ಹಾಗಾಗಿ, ಜುಲೈ 31ರವರೆಗೆ ಈ ಪ್ರಕ್ರಿಯೆಯನ್ನು ವಿಜ್ಞಾನಿಗಳು ಮುಂದುವರಿಸಲಿದ್ದಾರೆ ಎಂದು ವಿವರಿಸಿದೆ. ಆಗಸ್ಟ್‌ 17ರಂದು ಪ್ಯೊಪಲ್ಷನ್‌ ಮಾಡ್ಯೂಲ್‌ ಮತ್ತು ಲ್ಯಾಂಡರ್ ಮಾಡ್ಯೂಲ್‌ ಅನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್‌ 23ರ ಸಂಜೆ 5.47ಕ್ಕೆ ಲ್ಯಾಂಡರ್‌ ಅನ್ನು ಸುರಕ್ಷಿತವಾಗಿ ‘ಸಾಫ್ಟ್‌ ಲ್ಯಾಂಡಿಂಗ್‌’ ಮಾಡಲಾಗುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: -3 | ಭೂಮಿಯ ಸುತ್ತ ಮೂರನೇ ಕಕ್ಷೆಗೆ ಇಂದು ಏರಲಿರುವ ಬಾಹ್ಯಾಕಾಶ ನೌಕೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.