ಚಂದ್ರನಲ್ಲಿ ಇಳಿಯುವ ಮೊದಲು ಸಂಪರ್ಕ ಕಡಿದುಕೊಂಡ ಜಪಾನ್‌ ನೌಕೆ; ಪತನ ಸಾಧ್ಯತೆ ಕೇಪ್‌ ಕೆನವರಲ್‌ (ಎಪಿ): ಜಪಾನ್‌ನ ಐಸ್ಪೇಸ್‌ ಸಂಸ್ಥೆಯು ಚಂದ್ರನಲ್ಲಿಗೆ ಕಳುಹಿಸಿದ್ದ ಬಾಹ್ಯಾಕಾಶ ನೌಕೆಯೊಂದು ಅತ್ಯಂತ ಕೊನೆಯ ಕ್ಷಣದಲ್ಲಿ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿದೆ. ನೌಕೆಯು ಪತನವಾಗಿರುವ ಸಾಧ್ಯತೆ ಇದೆ ಎಂದು ಸಂಸ್ಥೆ ಹೇಳಿದೆ. ಗಂಟೆಗೆ 25 ಕಿಲೊ ಮೀಟರ್‌ ವೇಗದಲ್ಲಿ ಚಂದ್ರನ ಅಂಗಳದತ್ತ ಬರುತ್ತಿದ್ದ ಹಾಗೂ ಅಂಗಳದಲ್ಲಿ ಇಳಿಯಲು ಕೇವಲ 10 ಮೀಟರ್‌ ಎತ್ತರದಲ್ಲಿದ್ದ ನೌಕೆ ಆ ಹಂತದಲ್ಲಿ ಸಂಪರ್ಕ ಕಡಿದುಕೊಂಡಿತು ಎಂದು ಐಸ್ಟೇಸ್‌ ಸಂಸ್ಥೆ ಹೇಳಿದೆ. ‘ಚಂದ್ರನ ಮೇಲೆ ನೌಕೆ ಇಳಿಸಲು ನಮಗೆ ಸಾಧ್ಯವಾಗಲಿಲ್ಲ ಎಂದು ನಾವು ಊಹಿಸುತ್ತಿದ್ದೇವೆ. ನೌಕೆಯು ಚಂದ್ರನ ಮೇಲೆ ಇಳಿದಿದೆಯೋ ಅಥವಾ ಪತನವಾಗಿದೆಯೋ ಎಂದು ತಿಳಿಸಲು ಸಾಧ್ಯವಾಗುತ್ತಿಲ್ಲ. ಈ ಸೋಲಿನಿಂದ ವಿಚಲಿತಗೊಂಡಿಲ್ಲ, ನಮ್ಮ ಪ್ರಯತ್ನ ಮುಂದುವರಿಯಲಿದೆ’ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ತಕೇಶಿ ಹಕಮಾಡ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.