3 | ಚಂದ್ರನ ಅಂಗಳಕ್ಕೆ ಲ್ಯಾಂಡರ್‌ ಇಳಿಯುವ ಸಮಯ, ಮಾಹಿತಿ ಇಲ್ಲಿದೆ ಬೆಂಗಳೂರು: ‘ಚಂದ್ರಯಾನ–3’ ನೌಕೆಯ ಲ್ಯಾಂಡರ್‌ ಘಟಕವನ್ನು ಚಂದ್ರನ ದಕ್ಷಿಣ ಧ್ರುವದ ಅಂಗಳಕ್ಕೆ (ಸಾಫ್ಟ್‌ ಲ್ಯಾಂಡಿಂಗ್‌) ಇಳಿಸಲು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ‘ಆಗಸ್ಟ್‌ 23ರಂದು (ಬುಧವಾರ) ಸಂಜೆ 6 ಗಂಟೆ 4 ನಿಮಿಷಕ್ಕೆ ಲ್ಯಾಂಡರ್‌ ಇಳಿಯಲಿದೆ. ಶುಭ ಹಾರೈಕೆ ಮತ್ತು ಸಕಾರಾತ್ಮಕ ಮನೋಭಾವನೆ ಹೊಂದಿರುವುದಕ್ಕೆ ಧನ್ಯವಾದಗಳು’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ. -3 : 🇮🇳-3 🌖 23, 2023, 18:04 . . ! ’ : ://./osrHMk7MZL … ../zyu1sdVpoE ‘ಚಂದ್ರಯಾನ–3’ ನೌಕೆಯ ಲ್ಯಾಂಡರ್‌ ಘಟಕ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಲ್ಯಾಂಡರ್‌(ವಿಕ್ರಮ್) ಹಾಗೂ ರೋವರ್ (ಪ್ರಗ್ಯಾನ್‌) ಒಳಗೊಂಡಿರುವ ಈ ಘಟಕದ ಎರಡನೇ ಹಂತದ ‘ಡೀಬೂಸ್ಟ್‌’ (ಲ್ಯಾಂಡರ್‌ನ ವೇಗ ತಗ್ಗಿಸುವ ಪ್ರಕ್ರಿಯೆ) ಇಂದು (ಭಾನುವಾರ) ಬೆಳಿಗ್ಗೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಇಸ್ರೊ ಹೇಳಿದೆ. ವಿಕ್ರಮ್ ಲ್ಯಾಂಡರ್ ಚಂದ್ರನಿಗೆ 25 ಕಿ.ಮೀ ಸಮೀಪವಿರುವ ಬಿಂದು ಮತ್ತು ಚಂದ್ರನಿಂದ 134 ಕಿ.ಮೀ ದೂರದ ಕಕ್ಷೆಯನ್ನು ತಲುಪಿದೆ. ಈ ಕಕ್ಷೆಯಿಂದಲೇ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನಿಸುತ್ತದೆ ಎಂದು ಇಸ್ರೊ ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.