ಬಜೆಟ್ ಸರಣಿ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್ ಬೆಂಗಳೂರು: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸರಣಿಯಲ್ಲಿ ಹೊಸ ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. A04 ಮತ್ತು A04e ಎಂಬ ಎರಡು ಮಾದರಿಗಳನ್ನು ಸ್ಯಾಮ್‌ಸಂಗ್ ಭಾರತದಲ್ಲಿ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ A04e ಸ್ಮಾರ್ಟ್‌ಫೋನ್‌ನಲ್ಲಿ 6.5 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಮೀಡಿಯಾಟೆಕ್ ಹೆಲಿಯೊ P35 12nm ಒಕ್ಟಾ ಕೋರ್ ಪ್ರೊಸೆಸರ್ ಮತ್ತು GE8320 ಗ್ರಾಫಿಕ್ಸ್ ಬೆಂಬಲ ಹೊಂದಿದೆ. ಅಲ್ಲದೆ, 3GB/4GB ಮತ್ತು 32GB / 128GB ಸ್ಟೋರೇಜ್ ಆಯ್ಕೆಗಳು ಕೂಡ ದೊರೆಯಲಿದೆ. ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 5,000mAh ಬ್ಯಾಟರಿ ಇದೆ ಎಂದು ಕಂಪನಿ ಹೇಳಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A04 ನೂತನ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನಲ್ಲಿ 6.5 ಇಂಚಿನ ಎಚ್‌ಡಿ ಡಿಸ್‌ಪ್ಲೇ, ಮೀಡಿಯಾಟೆಕ್ ಹೆಲಿಯೊ P35 12nm ಒಕ್ಟಾ ಕೋರ್ ಪ್ರೊಸೆಸರ್ ಇದೆ. ಅಲ್ಲದೆ, GE8320 ಗ್ರಾಫಿಕ್ಸ್ ಬೆಂಬಲ ಹೊಂದಿದೆ. 4GB ಮತ್ತು 64GB / 128GB ಸ್ಟೋರೇಜ್ ಬೆಂಬಲ ಇದ್ದು, ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆನ್ಸರ್ ಜತೆಗೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 5,000mAh ಬ್ಯಾಟರಿ ಬೆಂಬಲ ಹೊಂದಿದೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ. ಬೆಲೆ ವಿವರ ಸ್ಯಾಮ್‌ಸಂಗ್ ಗ್ಯಾಲಕ್ಸಿ A04e ತಿಳಿ ನೀಲಿ ಮತ್ತು ತಾಮ್ರದ ಬಣ್ಣದಲ್ಲಿ ಲಭ್ಯ 3GB + 32GB ಮಾದರಿಗೆ ₹9,299 3GB + 64GB ಆವೃತ್ತಿಗೆ ₹9,999 ಮತ್ತು 4GB 128GB ಮಾದರಿಗೆ ₹11,499 ದರವಿದೆ. M04: ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ– ಬೆಲೆ ವಿವರ ಸ್ಯಾಮ್‌ಸಂಗ್ ಗ್ಯಾಲಕ್ಸಿ A04 ಕಪ್ಪು, ತಾಮ್ರ ಮತ್ತು ಹಸಿರು ಬಣ್ಣದಲ್ಲಿ ಲಭ್ಯ 4GB ಹಾಗೂ 64GB ಮತ್ತು 128GB ಸ್ಟೋರೇಜ್ ಆವೃತ್ತಿಯಲ್ಲಿ ನೂತನ ಮಾದರಿಗಳು ಲಭ್ಯವಿದ್ದು, ಬೆಲೆ ಕ್ರಮವಾಗಿ ₹11,999 ಹಾಗೂ ₹12,999 ಇರಲಿದೆ. ಜತೆಗೆ ₹999 ದರದಿಂದ ಸೌಲಭ್ಯವೂ ಲಭ್ಯ. 13: ನೂತನ ಸ್ಮಾರ್ಟ್‌ಫೋನ್ ಪರಿಚಯಿಸಿದ ಶಓಮಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.