11 5G: ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಘೋಷಣೆ ಬೆಂಗಳೂರು: ಒನ್‌ಪ್ಲಸ್ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. 2023ರ ಆರಂಭದಲ್ಲೇ ನೂತನ ಗ್ಯಾಜೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ನೀಡುತ್ತಿದೆ. ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಒನ್‌ಪ್ಲಸ್ 11 5G, ಫೆಬ್ರುವರಿ 7, 2023ರಂದು ಬಿಡುಗಡೆಯಾಗುತ್ತಿದೆ. ಅದರ ಜತೆಗೆ, ಒನ್‌ಪ್ಲಸ್ ಬಡ್ಸ್ ಪ್ರೊ 2 ಕೂಡ ಬಿಡುಗಡೆ ಮಾಡಲು ಕಂಪನಿ ಮುಂದಾಗಿದೆ. ಅಧಿಕ ಸಂಖ್ಯೆಯ ಗ್ರಾಹಕರನ್ನು ಹೊಂದಿರುವ ಭಾರತದಲ್ಲಿ ಈಗಾಗಲೇ 5G ಸೇವೆ ಆರಂಭವಾಗಿರುವುದರಿಂದ, ನೂತನ ಒನ್‌ಪ್ಲಸ್ 11 ಸ್ಮಾರ್ಟ್‌ಫೋನ್ 5Gಯನ್ನೇ ಆದ್ಯತೆಯಾಗಿ ನೀಡುತ್ತಿದೆ. G53 5G: 50 ಮೆಗಾಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಮೊಟೊ ಒನ್‌ಪ್ಲಸ್ ಕ್ಲೌಡ್ 11 ಹೆಸರಿನ ಈವೆಂಟ್ ನವದೆಹಲಿಯಲ್ಲಿ ಫೆಬ್ರುವರಿ 7ರಂದು ಸಂಜೆ ನಡೆಯಲಿದೆ. ಐಫೋನ್‌ನಲ್ಲಿ ಸೋನಿ ಕ್ಯಾಮೆರಾ ಲೆನ್ಸ್: ಆ್ಯಪಲ್ ಸಿಇಒ ಹೇಳಿಕೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.