-3 | ಭೂಮಿಯಿಂದ ಚಂದ್ರನೆಡೆಗೆ ಸಾಗಿದ ಬಾಹ್ಯಾಕಾಶ ನೌಕೆ ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯು ಚಂದ್ರಯಾನ–3 'ಬಾಹ್ಯಾಕಾಶ ನೌಕೆ'ಯನ್ನು ಟ್ರಾನ್ಸ್‌ಲೂನಾರ್‌ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ. 'ಚಂದ್ರಯಾನ–3 ಬಾಹ್ಯಾಕಾಶ ನೌಕೆ ಭೂಮಿಯ ಸುತ್ತಲಿನ ಕಕ್ಷೆಯನ್ನು ಪೂರ್ಣಗೊಳಿಸಿದ್ದು, ಚಂದ್ರನ ಕಕ್ಷೆಯತ್ತ ಸಾಗಿದೆ. ಇದೀಗ 'ಲೂನಾರ್ ಟ್ರಾನ್ಸ್‌ಫರ್‌ ಟ್ರಾಜೆಕ್ಟರಿ' ಪಥದಲ್ಲಿ ನೌಕೆ ಸಾಗುತ್ತಿದೆ' ಎಂದು ಇಸ್ರೊ ತಿಳಿಸಿದೆ. 'ಸೋಮವಾರ ಮಧ್ಯರಾತ್ರಿ ಭೂಮಿಯ ಕಕ್ಷೆಯಿಂದ ಬೇರ್ಪಟ್ಟ ನೌಕೆ ಚಂದ್ರನೆಡೆಗೆ ಸಾಗಿದೆ. ನೌಕೆ ಚಂದ್ರನತ್ತ ಆಗಮಿಸುತ್ತಿದ್ದಂತೆ 'ಲೂನಾರ್‌–ಆರ್ಬಿಟ್‌ ಇನ್‌ರ್ಸಶನ್‌' (ಎಲ್‌ಓಐ) ಕಾರ್ಯ ಪ್ರಾರಂಭವಾಗುತ್ತದೆ. ಆಗಸ್ಟ್‌ 5ಕ್ಕೆ ಎಲ್‌ಓಐ ಮಾಡಲು ಯೋಜಿಸಲಾಗಿದೆ' ಎಂದು ತಿಳಿಸಿದೆ. ಆಗಸ್ಟ್‌ 17ರಂದು ಪ್ಯೊಪಲ್ಷನ್‌ ಮಾಡ್ಯೂಲ್‌ ಮತ್ತು ಲ್ಯಾಂಡರ್ ಮಾಡ್ಯೂಲ್‌ ಅನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್‌ 23ರ ಸಂಜೆ 5.47ಕ್ಕೆ ಲ್ಯಾಂಡರ್‌ ಅನ್ನು ಸುರಕ್ಷಿತವಾಗಿ ಚಂದ್ರನ ಮೇಲೆ ಲ್ಯಾಂಡ್‌ ಮಾಡಲಾಗುತ್ತದೆ ಎಂದು ತಿಳಿಸಿದೆ. ಜುಲೈ 14ರಂದು ಇಸ್ರೊ ಚಂದ್ರಯಾನ–3 ಯೋಜನೆಯ ಭಾಗವಾಗಿ ಬಾಹ್ಯಾಕಾಶ ನೌಕೆಯನ್ನು ಉಡ್ಡಯನ ಮಾಡಿತ್ತು. -3 : -3 . - , . : 🌖 , … ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.