X2 | ಭಾರತದಲ್ಲಿ ಮೊದಲ ಪ್ರೀಮಿಯಂ ಫೋನ್‌ ಬಿಡುಗಡೆ ಮಾಡಿದ ಟೆಕ್ನೋ ಬೆಂಗಳೂರು: ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ಭರವಸೆ ಮೂಡಿಸಿರುವ ‘ಟೆಕ್ನೋ‘ ಕಂಪನಿಯು ಭಾರತದಲ್ಲಿ ತನ್ನ ಮೊತ್ತ ಮೊದಲ ಪ್ರೀಮಿಯಂ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ. X2 ಹೆಸರಿನ ಸ್ಮಾರ್ಟ್‌ಫೋನ್‌ ಇದಾಗಿದ್ದು, ₹ 39,999 ದರ ನಿಗದಿ ಮಾಡಿದೆ. ಅಮೆಜಾನ್‌ ಹಾಗೂ ರೀಟೇಲ್ ಅಂಗಡಿಗಳಲ್ಲಿ ಫೋನ್ ಲಭ್ಯವಿರಲಿದೆ. ಜನವರಿ 2 ರಿಂದ ಪ್ರಿ ಬುಕ್ಕಿಂಗ್‌ ಆರಂಭವಾಗಿದ್ದು, ಜನವರಿ 9 ಮಾರಾಟ ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ. ಅಮೆಜಾನ್‌ನ 100 ಹಾಗೂ ರೀಟೇಲ್ 200 ಅದೃಷ್ಠಶಾಲಿ ಗ್ರಾಹಕರು X3ಗೆ ಅಪ್‌ಗ್ರೇಡ್‌ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಭಾರತದಲ್ಲಿ ಅದು ಬಿಡುಗಡೆಯಾಗುವವರೆಗೆ ಕಾಯಬೇಕಿದೆ. ಫೋನ್‌ ವೈಶಿಷ್ಟ್ಯಗಳು 5 ಜಿ ಫೋನ್‌ ಇದಾಗಿದ್ದು, ಎರಡು ಸಿಮ್‌ ಬಳಸುವ ಸೌಲಭ್ಯ ಇದೆ. 4nm 9000 ಪ್ರೊಸೆಸರ್ ಹೊಂದಿದ್ದು, ಹಿಂಬಾಗದ ಮುಖ್ಯ ಕ್ಯಾಮೆರಾ 64 ಎಂಪಿ ಅಲ್ಟ್ರಾ ಕ್ಲಿಯರ್‌ ನೈಟ್‌ ಕ್ಯಾಮೆರಾ ಇದರ ವಿಶೇಷ. ಇಮೇಜ್ ಸ್ಟೆಬಿಲೈಸೇಷನ್‌, ಡ್ಯುಯಲ್‌ ವಿಡಿಯೊ, ಎಚ್‌ಡಿಆರ್‌ ವಿಡಿಯೊ, 4ಕೆ ವಿಡಿಯೊ ಸೌಲಭ್ಯ ಇದ್ದು, ಉತ್ತಮ ಕ್ಯಾಮೆರಾ ಅನುಭವ ನೀಡಲಿದೆ. 6.8 ಇಂಚಿನ ಡಿಸ್‌ಪ್ಲೇ ಇದ್ದು, 5160 ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಒಮ್ಮೆ ಪೂರ್ತಿ ಚಾರ್ಜ್‌ ಮಾಡಿದರೆ 25 ದಿನಗಳ ಸ್ಟಾಂಡ್ ಬೈ ಹಾಗೂ 23 ಗಂಟೆಗಳ ಪ್ಲೇ ಬ್ಯಾಕ್ ಸಮಯ ಬಳಸಬಹುದು. 45W ಫಾಸ್ಟ್‌ ಚಾರ್ಜಿಂಗ್‌ ಹೊಂದಿಗೆ ಎಂದು ಕಂಪನಿ ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.