4G ಪೋರ್ಟಬಲ್ - ಹಾಟ್‌ಸ್ಪಾಟ್ ಬಿಡುಗಡೆ ಮಾಡಿದ ಟೆಕ್‌ನೊ ಬೆಂಗಳೂರು: ಬಜೆಟ್ ದರದ ಸ್ಮಾರ್ಟ್‌ಫೋನ್ ಮೂಲಕ ಮಾರುಕಟ್ಟೆಯಲ್ಲಿ ಹೆಸರು ಗಳಿಸಿರುವ ಟೆಕ್‌ನೊ, ಹೊಸ ಮಾದರಿಯ 4G ಪೋರ್ಟಬಲ್ - ಹಾಟ್‌ಸ್ಪಾಟ್ ಬಿಡುಗಡೆ ಮಾಡಿದೆ. ಟೆಕ್‌ನೊ 4G ಪೋರ್ಟಬಲ್ - ಹಾಟ್‌ಸ್ಪಾಟ್ TR109 ಮಾದರಿ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಒಂದು ಬಾರಿಗೆ 16 ಉಪಕರಣಗಳನ್ನು ಕನೆಕ್ಟ್ ಮಾಡಬಹುದು ಎಂದು ಕಂಪನಿ ಹೇಳಿದೆ. 3000mAh ಬ್ಯಾಟರಿ ಬೆಂಬಲ ಮತ್ತು 7 ದಿನಗಳ ಬ್ಯಾಟರಿ ಬಾಳಿಕೆ ಹೊಸ ವೈ–ಫೈ ಹಾಟ್‌ಸ್ಪಾಟ್‌ನಲ್ಲಿ ಇದೆ ಎಂದು ಟೆಕ್‌ನೊ ತಿಳಿಸಿದೆ. 2.4GHz 300Mbps ವೈಫೈ ಫ್ರಿಕ್ವೆನ್ಸಿ ವ್ಯಾಪ್ತಿಯನ್ನು ಹೊಸ ಟೆಕ್‌ನೊ 4G ಪೋರ್ಟಬಲ್ - ಹಾಟ್‌ಸ್ಪಾಟ್ ಹೊಂದಿದೆ. Y75: ವಿವೊ ನೂತನ ಸ್ಮಾರ್ಟ್‌ಫೋನ್ ದರ ₹1,000 ಇಳಿಕೆ ಬೆಲೆ ಮತ್ತು ಲಭ್ಯತೆ ಅಮೆಜಾನ್ ಮೂಲಕ ಹೊಸ ಟೆಕ್‌ನೊ 4G ಪೋರ್ಟಬಲ್ - ಹಾಟ್‌ಸ್ಪಾಟ್ ಲಭ್ಯವಿದ್ದು, ₹2,499 ದರ ಹೊಂದಿದೆ. 3 | ಹೊಸ ಸ್ಮಾರ್ಟ್‌ಫೋನ್ ಬೆಲೆ ₹2000 ಇಳಿಕೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.