ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್23 ಸರಣಿಯ ಎಲ್ಲ ಫೋನ್‌ಗಳು ಭಾರತದಲ್ಲೇ ತಯಾರಿಕೆ ದೇಶದ ಪ್ರಮುಖ ಎಲೆಕ್ಟ್ರಾನಿಕ್ಸ್‌ ಬ್ರಾಂಡ್‌ ಸ್ಯಾಮ್‌ಸಂಗ್‌, ಭಾರತದಲ್ಲಿ ಮಾರಾಟ ಮಾಡುವ ತನ್ನ ಗ್ಯಾಲಕ್ಸಿ S23 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲೇ ತಯಾರಿಸುವುದಾಗಿ ಹೇಳಿದೆ. ನೋಯ್ಡಾದಲ್ಲಿರುವ ದೇಶದ ಅತೀ ದೊಡ್ಡ ಮೊಬೈಲ್‌ ತಯಾರಿಕ ಘಟಕದಲ್ಲಿ ಈ ಫೋನ್‌ಗಳು ಉತ್ಪಾದನೆಯಾಗಲಿದೆ. 2018ರಲ್ಲಿ ಈ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದ್ದರು. ಭಾರತದ ಉತ್ಪಾದನೆ ಹಾಗೂ ಬೆಳವಣಿಗೆ ಬೆಳವಣಿಗೆ ಹೊಂದುವ ಉದ್ದೇಶಕ್ಕೆ ಪೂರಕವಾಗಿ, ‘ಮೇಡ್‌ ಇನ್‌ ಇಂಡಿಯಾ‘ ಗ್ಯಾಲಕ್ಸಿ S23 ಮೊಬೈಲ್‌ ಫೋನ್‌ಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು ಎಂದು ಸಾಮ್ಸಂಗ್‌ ಹೇಳಿದೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿ 8 ಪ್ರೊಸೆಸರ್ ಇರಲಿದ್ದು, ಅನೂಹ್ಯ ಅನುಭವ ನೀಡುವ ಗೇಮಿಂಗ್‌ ಫೀಚರ್‌ ಇರಲಿದೆ. ಇದಕ್ಕಾಗಿ ವಿಶ್ವದ ವೇಗದ ಮೊಬೈಲ್ ಗ್ರಾಫಿಕ್ಸ್‌ಗಳನ್ನು ಬಳಕೆ ಮಾಡಲಾಗಿದೆ. ಈ ಮೊಬೈಲ್‌ನಲ್ಲಿ ಮರುಬಳಕೆ ಮಾಡಲಾದ ವಸ್ತುಗಳನ್ನು ಹೆಚ್ಚಾಗಿ ಬಳಸಲಾಗಿದ್ದು, 200MP ಅತ್ಯಾಧುನಿಕ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.