ಟಾಪ್ ಲೋಡ್ ವಾಷಿಂಗ್ ಮೆಷಿನ್ ಪ್ರಮುಖ ಗೃಹೋಪಕರಣಗಳ ಬ್ರ್ಯಾಂಡ್ ‘ಹಾಯರ್’ ಡಬಲ್ ಡ್ರಮ್ ಟಾಪ್ ಲೋಡ್ ವಾಷಿಂಗ್ ಮೆಷಿನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.ಹೊಸ ಡುಯೊ ವಾಷಿಂಗ್ ಮಷಿನ್‌ನ ಎರಡು ಡ್ರಮ್‍ಗಳು ಕ್ರಮವಾಗಿ 7ಕೆಜಿ ಮತ್ತು 2.5 ಕೆಜಿ ಸಾಮರ್ಥ್ಯ ಹೊಂದಿದೆ. ಅವುಗಳಲ್ಲಿ ಎರಡೂ ಡ್ರಮ್‍ಗಳು ಎರಡು ಪ್ರತ್ಯೇಕ ಬಗೆಯ ಲೋಡ್‍ಗಳಲ್ಲಿ ಏಕಕಾಲಕ್ಕೆ ಕಾರ್ಯ ನಿರ್ವಹಿಸಬಲ್ಲವು. ಎರಡೂ ಡ್ರಮ್‍ಗಳು ಏಕಕಾಲಕ್ಕೆ ಕೆಲಸ ಮಾಡಲು ಟಚ್ ಕಂಟ್ರೋಲ್‍ ಇದೆ.ಮ್ಯಾಜಿಕ್ ಫಿಲ್ಟರ್‌ಗಳು, ಬಳಕೆದಾರರು ಹಲವು ಪ್ರಿ-ಸೆಟ್ ಕಾರ್ಯಗಳಿಂದ ಅವರಿಗೆ ಸೂಕ್ತವಾಗಿ ಹೊಂದುವ ನಾರ್ಮಲ್, ಹೆವಿ, ಕ್ವಿಕ್ ಅಥವಾ ಹೆಚ್ಚು ವಿಶೇಷವಾಗಿ ಸೂಕ್ಷ್ಮ ಬಟ್ಟೆಗಳು, ಒಳಉಡುಪುಗಳು ಮತ್ತು ಮಕ್ಕಳ ಬಟ್ಟೆಗಳಿಗೆ ನೀಡುತ್ತದೆ. ಇದರಲ್ಲಿ ಟ್ರಿಪಲ್ ಡಿಟರ್ಜೆಂಟ್ ಬಾಕ್ಸ್ ಇದ್ದು ಎಲ್ಲ ಬಗೆಯ ಡಿಟರ್ಜೆಂಟ್ ಅಥವಾ ಸಾಫ್ಟ್‌ನರ್ ಸಂಗ್ರಹಿಸಬಹುದು. ಮಾರುಕಟ್ಟೆ ಬೆಲೆ: ₹50,999 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.