2023 | ಬಜೆಟ್ ದರಕ್ಕೆ ಹೊಸ ಸ್ಮಾರ್ಟ್‌ಫೋನ್ ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಟೆಕ್‌ನೊ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಬಜೆಟ್ ದರದ ಸ್ಮಾರ್ಟ್‌ಫೋನ್‌ಗಳು ಟೆಕ್‌ನೊ ಸರಣಿಯ ವಿಶೇಷತೆ ಎಂದು ಕಂಪನಿ ಹೇಳಿದೆ. ಹೊಸ ಟೆಕ್‌ನೊ ಸ್ಪಾರ್ಕ್ ಗೊ 2023 ಸ್ಮಾರ್ಟ್‌ಫೋನ್, 6.56 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಡ್ಯುವೆಲ್ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಸ ಸ್ಮಾರ್ಟ್‌ಫೋನ್‌ನಲ್ಲಿದೆ ಎಂದು ಟೆಕ್‌ನೊ ಹೇಳಿದೆ. 3 + 32 ಸ್ಟೋರೇಜ್ ಹೊಸ ಟೆಕ್‌ನೊ ಸ್ಮಾರ್ಟ್‌ಫೋನ್‌ನಲ್ಲಿ ಇದ್ದು, ಮೀಡಿಯಾಟೆಕ್ A22 2.0 ಪ್ರೊಸೆಸರ್ ಇದೆ. 5000mAh ಬ್ಯಾಟರಿ ಜತೆಗೆ, 10W ಚಾರ್ಜರ್ ನೂತನ ಸ್ಮಾರ್ಟ್‌ಫೋನ್‌ ವಿಶೇಷತೆ ಎಂದು ಕಂಪನಿ ತಿಳಿಸಿದೆ. T21 | ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ ಭಾರತದಲ್ಲಿ ಮಾರುಕಟ್ಟೆಯಲ್ಲಿ ಹೊಸ ಟೆಕ್‌ನೊ ಸ್ಪಾರ್ಕ್ ಗೊ 2023 ಬೆಲೆ ₹6,999 ಇದೆ ಎಂದು ಟೆಕ್‌ನೊ ಹೇಳಿದೆ. 10 | ಭಾರತದಲ್ಲಿ ಬಿಡುಗಡೆಯಾಯ್ತು ರಿಯಲ್‌ಮಿ ಹೊಸ ಸ್ಮಾರ್ಟ್‌ಫೋನ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.