ಇನ್ಸ್ಟಂಟ್ ಟ್ರಾವೆಲ್‌ ಟಿಕೆಟ್‌ ಆನ್‍ಲೈನ್ ರೈಲ್ವೆ ಟಿಕೆಟ್ ಬುಕಿಂಗ್ ವೇದಿಕೆಯಾದ ಕನ್ಫರ್ಮ್‌ಟಿಕೆಟ್ ಗ್ರಾಹಕರಿಗಾಗಿ ವಿನೂತನ ಸೌಲಭ್ಯ ಪರಿಚಯಿಸಿದೆ. ಇನ್ನು ಮುಂದೆ ಪ್ರಯಾಣಿಕರು ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳದೆ ನೇರವಾಗಿ ರೈಲ್ವೆ ಟಿಕೆಟ್ ಬುಕ್ ಮಾಡಬಹುದು. ಅಷ್ಟೆ ಅಲ್ಲ, ಪಿಎನ್‍ಆರ್, ಸಂಚಾರಿ ಟ್ರೈನ್ ಲೈವ್ ಟ್ಟೇಟಸ್ ಹಾಗೂ ಸೀಟ್ ಸಿಗುವ ಬಗ್ಗೆ ಮಾಹಿತಿ ಸೇರಿದಂತೆ ರೈಲಿನ ವೇಳಾಪಟ್ಟಿ ಮತ್ತು ರೈಲು ಬೋಗಿಯ ಸ್ಥಾನವನ್ನು ಈ ಆ್ಯಪ್ ಮೂಲಕ ತಿಳಿದು ಕೊಳ್ಳಬಹುದು. ಜತೆಗೆ, ಹಿಂದಿನ ಹಾಗೂ ಮುಂದಿನ ಸ್ಟೇಷನ್‌ಗಳಲ್ಲಿ ಲಭ್ಯವಿರುವ ಖಾಲಿ ಸೀಟ್‍ಗಳ ಬಗ್ಗೆ ಮತ್ತು ಖಚಿತ ಸೀಟ್ ಕಾಯ್ದಿರಿಸುವುದಕ್ಕೆ ಪರ್ಯಾಯವನ್ನು ಸಹ ಈ ಆ್ಯಪ್ ಸೂಚಿಸುತ್ತದೆ. ಪ್ಲೇಸ್ಟೋರ್‌ನಲ್ಲಿ ಕನ್ಫರ್ಮ್‌ಟಿಕೆಟ್‌ ಎಂದು ಟೈಪ್ ಮಾಡಿದರೆ, ಒಂದು ಕಡೆ ಡೌನ್‌ಲೋಡ್ ಎಂದು, ಇನ್ನೊಂದು ಕಡೆ ಟ್ರೈ ಎಂಬ ಆಪ್ಷನ್ ಬರುತ್ತದೆ. ಟ್ರೈ ಆಪ್ಷನ್ ಆಯ್ಕೆ ಮಾಡಿಕೊಂಡರೆ, ಆ್ಯಪ್ ಡೌನ್‌ಲೋಡ್ ಮಾಡದೆಯೇ, ಮೇಲೆ ಹೇಳಿದ ಎಲ್ಲ ಸೇವೆಗಳನ್ನು ಪಡೆಯಬಹುದು. ರಿಯಲ್-ಟೈಮ್ ಟ್ರೈನ್ ಟ್ರ್ಯಾಕಿಂಗ್ ವ್ಯವಸ್ಥೆ ಜತೆಗೆ ಆಫ್‍ಲೈನ್ ಮೋಡ್‍ನಲ್ಲೂ ಸಹ ಟ್ರೈನ್ ಮಾಹಿತಿ ಪಡೆಯಬಹುದು. ಈ ವಿಧಾನದಿಂದ ಮೊಬೈಲ್ ಮೆಮೊರಿ ಸ್ಟೋರೇಜ್ ಉಳಿತಾಯವಾಗುತ್ತದೆ. ಜತೆಗೆ, ಹೆಚ್ಚುವರಿ ಆ್ಯಪ್‌ ಸೇರುವುದನ್ನು ತಡೆಯಬಹುದು. ಈಗಾಗಲೇ ಸುಮಾರು 5 ದಶಲಕ್ಷಕ್ಕಿಂತಲೂ ಹೆಚ್ಚಿನ ಡೌನ್‍ಲೋಡ್ ಆಗಿದ್ದು, 4.5 ರೇಟಿಂಗ್ ಅನ್ನು ಗೂಗಲ್ ಪ್ಲೆಸ್ಟೋರ್‌ನಲ್ಲಿ ದಾಖಲಿಸಿದೆ. ಸದ್ಯಕ್ಕೆ ಹಿಂದಿ ಇಂಗ್ಲಿಷ್, ಹಾಗು ತೆಲುಗು ಭಾಷೆಯಲ್ಲೂ ಈ ಆ್ಯಪ್ ಲಭ್ಯವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.